×
Ad

ಮಣಿಪುರ: ಬಾಂಬ್‌ ದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್‌ ಸಿಬ್ಬಂದಿ ಮೃತ್ಯು

Update: 2024-04-27 10:38 IST

Photo: ANI

ಇಂಫಾಲ್: ಮಣಿಪುರದ ಬಿಷ್ಣುಪುರ್‌ ಜಿಲ್ಲೆಯ ಅರೆಸೇನಾ ಪಡೆಯ ಔಟ್‌ಪೋಸ್ಟ್‌ನಲ್ಲಿ ಉಂಟಾದ ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್‌ ಸಿಬ್ಬಂದಿ ಬಲಿಯಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಸ್ಫೋಟದಲ್ಲಿ ಬಲಿಯಾದವರನ್ನು ಎಸ್ಸೈ ಎನ್‌ ಸರ್ಕಾರ್‌ ಮತ್ತು ಹೆಡ್‌ ಕಾನ್‌ಸ್ಟೇಬಲ್‌ ಅರುಪ್‌ ಸೈನಿ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಕಳೆದು ಸುಮಾರು 12.45ಕ್ಕೆ ಘಟನೆ ನಡೆದಿದೆ.

ಬಂದೂಕುಧಾರಿಗಳು ಮೈತೈ ಬಾಹುಳ್ಯದ ಬಿಷ್ಣುಪುರ್‌ ಜಿಲ್ಲೆಯ ನರೈಸೇನಾ ಗ್ರಾಮದಲ್ಲಿ ಗುಂಡು ಹಾರಾಟ ನಡೆಸಿದ್ದರು. ಅವರು ಬಾಂಬ್‌ ದಾಳಿ ನಡೆಸಿದ್ದು ಬಾಂಬ್‌ ನೇರವಾಗಿ ಸಿಆರ್‌ಪಿಎಫ್‌ ಔಟ್‌ಪೋಸ್ಟ್‌ನಲ್ಲಿ ಸ್ಫೋಟಿಸಿತ್ತು.

ಇನ್ನೊಂದು ಘಟನೆಯಲ್ಲಿ ಪೂರ್ವ ಇಂಫಾಲ್‌ ಜಿಲ್ಲೆಯ ಸಿನಮ್‌ ಗ್ರಾಮದಲ್ಲಿ ಕಳೆದ ರಾತ್ರಿ ಗುಂಡಿನ ಚಕಮಕಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಈತ ಮೀಟಿ ಸಮುದಾಯಕ್ಕೆ ಸೇರಿದವರೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News