×
Ad

1996ರಲ್ಲಿ ಮ್ಯಾಚ್ ಫಿಕ್ಸಿಂಗ್ ಹೆಚ್ಚಾಗಿತ್ತು: ಶುಐಬ್ ಅಖ್ತರ್

Update: 2016-10-17 23:50 IST

 ಕರಾಚಿ, ಅ.17: ಮ್ಯಾಚ್ ಫಿಕ್ಸಿಂಗ್ ಪ್ರಕರಣ 1996ರಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದರೆ, ಆಗ ನಾನು ಯಾವುದೇ ಕಳ್ಳಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಹೇಳಿದ್ದಾರೆ.

ಪಾಕಿಸ್ತಾನದ ಡ್ರೆಸ್ಸಿಂಗ್ ರೂಮ್ ತುಂಬಾ ವಿಚಿತ್ರವಾಗಿತ್ತು... ಅತ್ಯಂತ ಕಳಪೆಯೂ ಆಗಿತ್ತು. ನಾನು ಫಿಕ್ಸಿಂಗ್ ಪಿಡುಗಿನಿಂದ ದೂರವೇ ಉಳಿದಿದ್ದೆ. ಇತರರಿಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೆ. ಪರಿಪೂರ್ಣ ಹಾಗೂ ಪ್ರಾಮಾಣಿಕವಾಗಿ ಆಡುವಂತೆ ಸಹ ಆಟಗಾರರಿಗೆ ಸಲಹೆ ನೀಡುತ್ತಿದ್ದೆ. 2010ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿದ್ದ ಮುಹಮ್ಮದ್ ಆಮಿರ್‌ಗೆ ಮ್ಯಾಚ್ ಫಿಕ್ಸರ್‌ಗಳಿಂದ ದೂರು ಇರುವಂತೆ ನಾನು ಎಚ್ಚರಿಕೆ ನೀಡಿದ್ದೆ. ಆದರೆ, ಆತ ನಾನು ಮಾತು ಕೇಳಲಿಲ್ಲ ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್ ಹೇಳಿದ್ದಾರೆ.

ಜಾವೇದ್ ಮಿಯಾಂದಾದ್ ಹಾಗೂ ಶಾಹಿದ್ ಅಫ್ರಿದಿ ನಡುವಿನ ವಾಕ್ಸಮರಕ್ಕೆ ನಾನು ಅಂತ್ಯ ಹಾಡಿದ್ದೆ. ಇಂತಹ ವಿಷಯ ಕೊನೆಗೊಳ್ಳಲು ಮಾತುಕತೆ ಪರಿಹಾರ. ನಾನು ಅಫ್ರಿದಿ ಹಾಗೂ ಜಾವೇದ್‌ರೊಂದಿಗೆ ಮಾತನಾಡಿ ಅವರಿಬ್ಬರ ಭಿನ್ನಾಭಿಪ್ರಾಯ ಬಗೆಹರಿಸಿದ್ದೆ. ಜಾವೇದ್ ಬಾಯಿ ಮುಚ್ಚಿಸಲು ಕಾನೂನು ನೋಟಿಸ್ ನೀಡಬೇಡ ಎಂದು ಅಫ್ರಿದಿಗೆ ನಾನು ಸಲಹೆ ನೀಡಿದ್ದೆ. ಅವರಿಬ್ಬರ ನಡುವಿನ ವಾಗ್ವಾದದಿಂದ ಪಾಕ್ ಕ್ರಿಕೆಟ್‌ನ ಘನತೆಗೆ ಧಕ್ಕೆ ಬಂದಿದೆ ಎಂದು ಅಖ್ತರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News