×
Ad

ಜಿಎಸ್‌ಟಿ ಸಮಿತಿಯ ತ್ರಿದಿನ ಸಭೆ ಇಂದು ಆರಂಭ

Update: 2016-10-17 23:51 IST

ಹೊಸದಿಲ್ಲಿ, ಅ.17: ಉನ್ನತಾಧಿಕಾರ ಜಿಎಸ್‌ಟಿ ಸಮಿತಿಯ ಮಹತ್ವದ 3 ದಿನಗಳ ಸಭೆಯು ನಾಳೆ ಆರಂಭವಾಗಲಿದೆ. ಅದು, 2017ರ ಎ.1ರಿಂದ ಜಾರಿಗೆ ಬರಲಿರುವ ಹೊಸ ಪರೋಕ್ಷ ತೆರಿಗೆ ಪದ್ಧತಿಯ ತೆರಿಗೆ ದರ ಹಾಗೂ ಪರಿಹಾರ ಸೂತ್ರದಂತಹ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಸಮಿತಿಯಲ್ಲಿರುವ ಎಲ್ಲ ವಿಚಾರಗಳ ಬಗ್ಗೆ ಏಕಾಭಿಪ್ರಾಯ ರೂಪಿಸಲು ವಿತ್ತ ಸಚಿವಾಲಯವು ನ.22ರ ಅಂತಿಮ ಗಡುವನ್ನು ಇರಿಸಿದೆ. ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವ ತೆರಿಗೆ ದರದಂತಹ ನಿರ್ಣಾಯಕ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿರುವ ಈ ಸಭೆ ಮಹತ್ವದ್ದಾಗಿದೆ.
ಹೊಸ ತೆರಿಗೆ ಪದ್ಧತಿಯನ್ವಯ 11 ಲಕ್ಷ ಸೇವಾ ತೆರಿಗೆದಾರರ ವೌಲ್ಯಮಾಪನ ನಡೆಸುವ ಅಧಿಕಾರವನ್ನು ಕೇಂದ್ರವು ಇರಿಸಿಕೊಳ್ಳುವ ಕುರಿತಾದ ಜಟಿಲ ಸಮಸ್ಯೆಯ ಕುರಿತು ನಾಳೆಯ ಸಭೆಯು ಚರ್ಚಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News