ಮುಂದಿನ ಆದೇಶದವರೆಗೂ ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್‌ ನೀರು ಹರಿಸಿ

Update: 2016-10-19 11:29 GMT

’ಹೊಸದಿಲ್ಲಿ, ಅ.19: ಮುಂದಿನ ಆದೇಶದ ವರೆಗೂ ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ ಇಂದು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.

 ಸುಪ್ರೀಂಕೋರ್ಟ್‌ನ ನ್ಯಾಯ ಮೂರ್ತಿ ದೀಪಕ್ ಮಿಶ್ರ, ನ್ಯಾ.ಅಮಿತವ್ ರಾಯ್, ನ್ಯಾ.ಎಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ   ಇಂದು ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ.

ಇದೇ ವೇಳೆ ಅರ್ಜಿಗಳ ಸಿಂಧುತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ನ  ತ್ರಿಸದಸ್ಯ ಪೀಠ ಕಾಯ್ದಿರಿಸಿತು.

ಅರ್ಜಿಗಳು ವಿಚಾರಣೆಗೆ ಯೋಗ್ಯವೆಂದು ಕರ್ನಾಟಕ, ತಮಿಳುನಾಡು ಕೇರಳ ವಾದ ಮಂಡಿಸಿದೆ. ಆದರೆ ಅರ್ಜಿಗಳ ವಿಚಾರಣೆಗೆ ಯೋಗ್ಯವಲ್ಲವೆಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ಪುದುಚೇರಿ ಕೇಂದ್ರದ ವಾದವನ್ನು ಬೆಂಬಲಿಸಿತು. 

 ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ  ಮೇಲ್ಮನವಿ ಅರ್ಜಿಯನ್ನು    ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ನಡೆಸಿತು. ತಮಿಳುನಾಡು  ಪರ ವಕೀಲ ಶೇಖರ‍್ ನಫಾಡೆ  ಮತ್ತು ಕರ್ನಾಟಕದ ಪರ ಫಾಲಿ ನಾರಿಮನ್ ವಾದ ಮಂಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News