ಮಲಪ್ಪುರಂ ಮುಸ್ಲಿಮರನ್ನು ಅವಹೇಳನ ಮಾಡಿದ ವಿಜ್ಞಾನಿಯ ವಿರುದ್ಧ ಕೇಸು ದಾಖಲು

Update: 2016-10-19 07:26 GMT

ವಡಕ್ಕರ, ಅಕ್ಟೋಬರ್ 19: ಮಲಪ್ಪುರಂ ಜಿಲ್ಲೆಯ ಮುಸ್ಲಿಮರನ್ನು ಅವಹೇಳನ ನಡೆಸಿ ಭಾಷಣ ಮಾಡಿದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸಯಂಟಿಫಿಕ್ ಹೆರಿಟೇಜ್‌ನ ನಿರ್ದೇಶಕ ಡಾ.ಎನ್. ಗೋಪಾಲಕೃಷ್ಣನ್ ವಿರುದ್ಧ ಪೊತ್ತುಕ್ಕಲ್ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಹೈಕೋರ್ಟು ವಕೀಲ ಜಹಾಂಗೀರ್‌ರು ಇವರ ವಿರುದ್ಧ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು. ಧಾರ್ಮಿಕ ಪೈಪೋಟಿ ಬೆಳೆಸುವ ರೀತಿಯಲ್ಲಿ ಚಟುವಟಿಕೆ ನಡೆಸಿದ್ದು, ಒಂದು ಧರ್ಮವಿಭಾಗವನ್ನು ಅವಹೇಳನ ನಡೆಸಿದ್ದಕಾಗಿ 153ಎ,295 ಎ ಕಲಂ ಪ್ರಕಾರ ಗೋಪಾಲಕೃಷ್ಣನ್ ವಿರುದ್ಧ ಎಸ್ಸೈ ಕೆ.ದಿಜೇಶ್ ಕೇಸುದಾಖಲಿಸಿದ್ದಾರೆ. ಗೋಪಾಲಕೃಷ್ಣನ್ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಿಸಿರುವುದರಿಂದ ಕೇಸನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಗೋಪಾಲಕೃಷ್ಣನ್ ವಿರುದ್ಧ ಯೂತ್ ಲೀಗ್‌ನಿಂದ ದೂರು:

ಮಲಪ್ಪುರಂ: ಕೋಮು ದ್ವೇಷ ಹರಡುವ ಭಾಷಣ ಮಾಡಿರುವುದಕ್ಕಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯಂಟಿಫಿಕ್ ಹೆರಿಟೇಜ್ ಸಂಸ್ಥಾಪಕ ಡಾ. ಎನ್. ಗೋಪಾಲಕೃಷ್ಣನ್ ವಿರುದ್ಧ ಯುಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಮುಸ್ಲಿಂ ಯೂತ್ ಲೀಗ್ ಎಡರಿಕ್ಕೋಡ್ ಪಂಚಾಯತ್ ಸಮಿತಿ ಕೋಟ್ಟಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

   ಗೋಪಾಲಕೃಷ್ಣರ ಭಾಷಣ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವುದು ಆಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಧರ್ಮ ಮತ್ತು ರಾಜಕೀಯಕ್ಕೆ ಅತೀತವಾಗಿ ಪರಸ್ಪರ ಗೌರವಪೂರ್ಣವಾಗಿ ಜೀವಿಸುವ ಮಲಪ್ಪುರಂ ಮುಸ್ಲಿಮರನ್ನು ಎನ್. ಗೋಪಾಲಕೃಷ್ಣನ್ ಕೆಟ್ಟಭಾಷೆಯಲ್ಲಿ ಅಪಮಾನಿಸಿದ್ದಾರೆ ಎಂದು ಕೂಡಾ ದೂರಿನಲ್ಲಿ ಆರೋಪ ಹೊರಿಸಲಾಗಿದೆ. ಹಂದಿ ಹೆರುವಂತೆ ಮಲಪ್ಪುರಂ ಮುಸ್ಲಿಮರು ಎರಡು ,ಮೂರು ಪತ್ನಿಯರಲ್ಲಿ ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ ಎಂದು ಗೋಪಾಲಕೃಷ್ಣನ್ ಟೀಕಿಸಿ ಮಾಡಿದ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News