ಬುದ್ಧಿ ಚುರುಕಾಗಬೇಕಾದರೆ ಮಾಂಸ ತಿನ್ನಿ!

Update: 2016-10-19 18:18 GMT

ನೀವೇನು ತಿನ್ನುತ್ತೀರಿ ಮತ್ತು ತಿನ್ನುವುದಿಲ್ಲ ಎನ್ನುವುದು ನಿಮ್ಮ ಪರೀಕ್ಷೆಯ ಅಂಕಗಳು ಅಥವಾ ಸಂದರ್ಶನದಲ್ಲಿ ನೀವು ತೋರಿಸುವ ಪ್ರತಿಭೆಯ ಮೇಲೆ ಪರಿಣಾಮ ಬೀರುತ್ತದೆ. ಪೌಷ್ಠಿಕ ಆಹಾರ ತಜ್ಞರು ಆರೋಗ್ಯಕರ ಆಹಾರ ಅಭ್ಯಾಸವು ಅತೀ ಒತ್ತಡವನ್ನು ನಿಭಾಯಿಸಲು ಸಹಕಾರಿ ಎಂದು ಹೇಳಿದ್ದಾರೆ. ಪರೀಕ್ಷೆಯ ದಿನ ಬೆಳಗಿನ ಉಪಾಹಾರ ಸೇವಿಸದೆ ಹೋಗಲೇಬೇಡಿ. ಈ ಅಭ್ಯಾಸವು ಮೆದುಳಿನ ಮೇಲೆ ಅಡ್ಡ ಪರಿಣಾಮ ಬೀರಲಿದೆ.

ನಿಮ್ಮ ಮೆದುಳನ್ನು ತೀಕ್ಷ್ಣಗೊಳಿಸಲು ಸಾಕಷ್ಟು ಆಹಾರದ ಆಯ್ಕೆಗಳು ನಿಮ್ಮ ಮುಂದಿವೆ. ಹೀಗಾಗಿ ಉತ್ತಮ ದಿನದ ಆರಂಭಕ್ಕಾಗಿ ಈ ಕೆಳಗಿನ ಆಹಾರಗಳನ್ನು ಸೇವಿಸಬಹುದು.

1. ಗ್ರೀನ್ ಟೀ

ಸದಾ ಜಾಗೃತರಾಗಿರಲು ಕಾಫಿ ಅತೀ ಜನಪ್ರಿಯ ಆಯ್ಕೆ. ಆದರೆ ಅದರ ಪರಿಣಾಮ ಕಡಿಮೆ ಇರುತ್ತದೆ. ನೀವು ಇಡೀ ದಿನ ಜಾಗೃತರಾಗಿರಲು ದಿನಕ್ಕೆ ಒಂದರ ನಂತರ ಮತ್ತೊಂದು ಕಪ್ ಕುಡಿಯುತ್ತಲೇ ಇರಬಹುದು. ದುರದೃಷ್ಟವಶಾತ್ ಇದು ನಿಮ್ಮ ಆರೋಗ್ಯಕ್ಕೆ ಸಮಸ್ಯೆಯೊಡ್ಡಲಿದೆಯೇ ವಿನಾ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗದು. ಬದಲಾಗಿ ಕಫೈನ್ ಮೂಲವಿರುವ ಗ್ರೀನ್ ಟೀಯನ್ನು ಒಂದೆರಡು ಕಪ್ ಕುಡಿಯಬಹುದು. ಇದು ಗಮನವನ್ನು ತೀಕ್ಷ್ಣಗೊಳಿಸುತ್ತದೆ.

2. ಮೊಟ್ಟೆಗಳು

ಪರೀಕ್ಷೆಗೆ ಮೊದಲು ಬೇಯಿಸಿದ ಮೊಟ್ಟೆ ಜನಪ್ರಿಯ ಆಯ್ಕೆ. ನಿಮ್ಮ ಆಹಾರದಲ್ಲಿ ಇದನ್ನು ಪ್ರೊಟೀನ್ ಅಂಶದ ಅಗತ್ಯವಾಗಿ ಸೇರಿಸಲೇಬೇಕು. ಹಲವು ಅಧ್ಯಯನಗಳ ಪ್ರಕಾರ ಪ್ರೊಟೀನ್ ಮಾನಸಿಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಅಲ್ಲದೆ ತೃಪ್ತಿ ಹೊಂದಲು ಪರೀಕ್ಷೆ ತೆಗೆದುಕೊಳ್ಳುವಾಗ ನಿಮಗೆ ಹಸಿವೆಯ ಅನುಭವ ಆಗುವುದಿಲ್ಲ.

3. ಓಟ್ಸ್

ಮತ್ತೊಂದು ಆಯ್ಕೆಯೆಂದರೆ ಒಂದು ಬೌಲ್ ಓಟ್ಸ್ ಸೇವನೆ. ಅದರಲ್ಲಿ ಅಧಿಕ ಫೈಬರ್ ಇರುತ್ತದೆ. ನಿಧಾನವಾಗಿ ಜೀರ್ಣಗೊಳ್ಳುವ ಕಾರ್ಬೋಹೈಡ್ರೇಟ್‌ಗಳೂ ಇರುತ್ತವೆ. ಇದು ನಿಮಗೆ ಮತ್ತು ನಿಮ್ಮ ಮೆದುಳಿಗೆ ಸಾಕಷ್ಟು ಶಕ್ತಿ ಕೊಡುತ್ತದೆ.

4. ಮೀನು

ಬಂಗಡೆ, ಹೆರಿಂಗ್, ಸಾಲ್ಮಾನ್ ಮೊದಲಾದ ಮೀನುಗಳಲ್ಲಿ ಶ್ರೀಮಂತ ಕೊಬ್ಬುಗಳಿವೆ. ಮುಖ್ಯವಾಗಿ ಒಮೆಗಾ 3 ಫ್ಯಾಟಿ ಆಸಿಡ್ಸ್ ಇವೆ. ಇವು ಮೆದುಳಿನ ಶಕ್ತಿಯನ್ನು ಉದ್ದೀಪನಗೊಳಿಸುತ್ತವೆ. ಒಮೆಗಾ 3 ಮೆದುಳಿನ ಕೋಶಗಳನ್ನು ಹೆಚ್ಚು ಸಕ್ರಿಯಗೊಳಿಸಲು ನೆರವಾಗುತ್ತದೆ. ಹೀಗಾಗಿ ಸ್ಮರಣ ಶಕ್ತಿ ಹೆಚ್ಚಾಗುತ್ತದೆ.

5. ಕೋಳಿ ಮಾಂಸ

ಇದು ಮೊಟ್ಟೆಯ ರೀತಿಯಲ್ಲಿಯೇ ದೇಹಕ್ಕೆ ಅಗತ್ಯ ಪ್ರೊಟೀನ್ ಕೊಡುತ್ತದೆ. ಕೋಳಿ ಮಾಂಸ ತಿನ್ನುವುದು ರಕ್ತದಲ್ಲಿ ಸಕ್ಕರೆ ಅಂಶ ಸ್ಥಿರವಾಗಿರುವಂತೆ ಮಾಡುತ್ತದೆ. ಪರೀಕ್ಷೆಯ ನಡುವೆ ಹಸಿವೆಯೂ ಆಗುವುದಿಲ್ಲ. ಶಕ್ತಿ ಕುಂದುವ ಸಮಸ್ಯೆ ಇರುವುದಿಲ್ಲ. ಮಾನಸಿಕ ಸಾಮರ್ಥ್ಯವನ್ನು ಉಚ್ಛ್ರಾಯ ಸ್ಥಿತಿಯಲ್ಲಿಡುತ್ತದೆ.

6. ರೆಡ್ ಮೀಟ್

ವೀಲ್, ಬೀಫ್ ಮತ್ತು ಕುರಿ ಮಾಂಸಗಳು ಕಬ್ಬಿಣ ಅಂಶ ಹೆಚ್ಚಿರುವ ಮೂಲಗಳು. ಅಧಿಕ ಕಬ್ಬಿಣ ಅಂಶವಿರುವ ಇವು ಪರೀಕ್ಷೆಗಳ ಸಂದರ್ಭ ಹೆಚ್ಚು ಗಮನನೀಡಲು ಸಹಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News