ಸಲ್ಮಾನ್‌ಗೆ ಜೈಲು ಶಿಕ್ಷೆ ವಿಧಿಸಲು ಸು.ಕೋರ್ಟ್‌ಗೆ ರಾಜಸ್ಥಾನ ಸರಕಾರ ಆಗ್ರಹ

Update: 2016-10-19 13:26 GMT

ಜೈಪುರ,ಅ.19: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್‌ಖಾನ್‌ರನ್ನು ದೋಷಮುಕ್ತಿಗೊಳಿಸಿದ ರಾಜಸ್ಥಾನ ಹೈಕೋರ್ಟ್‌ನ ತೀರ್ಪನ್ನು ರಾಜಸ್ಥಾನ ಸರಕಾರವು ಸುಪ್ರೀಂಕೋರ್ಟ್‌ನಲ್ಲಿ ಶನಿವಾರ ಪ್ರಶ್ನಿಸಿದ್ದು, ಸಲ್ಮಾನ್ ಕೂಡಲೇ ಶರಣಾಗತರಾಗಿ, ಜೈಲುಸೇರಬೇಕೆಂದು ವಾದಿಸಿದೆ.

ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್‌ರನ್ನು ರಾಜಸ್ಥಾನ ಹೈಕೋರ್ಟ್ ಈ ವರ್ಷದ ಈ ವರ್ಷದ ಜುಲೈನಲ್ಲಿ ದೋಷಮುಕ್ತಗೊಳಿಸಿತ್ತು. ಸಲ್ಮಾನ್‌ಖಾನ್‌ರನ್ನು ದೋಷಮುಕ್ತಗೊಳಿಸಿರುವ ರಾಜಸ್ಥಾನ ಹೈಕೋರ್ಟ್‌ನ ತೀರ್ಪು ಲೋಪದಿಂದ ಕೂಡಿದೆಯೆಂದು ರಾಜಸ್ಥಾನ ಸರಕಾರವು ಸುಪ್ರೀಂಕೋರ್ಟ್‌ನಲ್ಲಿ ಪ್ರತಿಪಾದಿಸಿತು.. 1998ರಲ್ಲಿ ಜೋಧ್‌ಪುರದ ಅಭಯಾರಣ್ಯಗಳಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣಗಳಿಗೆ ಸಂಬಂಧಿಸಿ ಸಲ್ಮಾನ್ ದೋಷಿಯೆಂದು 2007ರಲ್ಲಿ ತೀರ್ಪು ನೀಡಿದ್ದ ಜೋಧ್‌ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರಿಗೆ ಕ್ರಮವಾಗಿ 1 ವರ್ಷ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ರಾಜಸ್ಥಾನ ಹೈಕೋರ್ಟ್ ಈ ಎರಡೂ ಪ್ರಕರಣಗಳನ್ನು ಸಲ್ಮಾನ್‌ರನ್ನು ದೋಷಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News