ಜಿಎಸ್‌ಟಿ: ಯಾವುದೆಲ್ಲ ದುಬಾರಿಯಾಗಲಿದೆ ನೋಡಿ

Update: 2016-10-20 03:53 GMT

ಹೊಸದಿಲ್ಲಿ, ಅ20: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು ಕನಿಷ್ಠ ಶೇಕಡ 6ರಿಂದ ಗರಿಷ್ಠ ಶೇಕಡ 26ರವರೆಗೆ ನಿಗದಿಪಡಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದು, ಇದು ಜಾರಿಯಾದಲ್ಲಿ, ಹಲವು ಅಗತ್ಯ ವಸ್ತುಗಳಾದ ಖಾದ್ಯತೈಲ, ಬೇಳೆಕಾಳು, ಚಿಕನ್, ಚಹಾ ಹಾಗೂ ಕಾಫಿ ಸೇರಿದಂತೆ ಹಲವು ವಸ್ತುಗಳು ದುಬಾರಿಯಾಗಲಿವೆ. ಇದೀಗ ಈ ವಸ್ತುಗಳ ಮೇಲೆ ಶೇಕಡ 3.5ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಅದು ಶೇಕಡ 6ಕ್ಕೆ ಹೆಚ್ಚಳವಾಗುವುದು ಇದಕ್ಕೆ ಕಾರಣ,
ಮಂಗಳವಾರ ನಡೆದ ಜಿಎಸ್‌ಟಿ ಸಭೆಯಲ್ಲಿ ಮಂಡಿಸಲಾದ ಪ್ರಸ್ತಾವನೆಯ ಪ್ರಕಾರ, ಗ್ರಾಹಕ ಬೆಲೆ ಸೂಚ್ಯಂಕ ವಸ್ತುಗಳ ಪಟ್ಟಿಯಲ್ಲಿರುವ 29 ವಸ್ತುಗಳ ಪೈಕಿ 19 ವಸ್ತುಗಳ ತೆರಿಗೆಯನ್ನು ಶೇಕಡ 6ಕ್ಕೆ ನಿಗದಿಪಡಿಸಲು ಯೋಜಿಸಲಾಗಿದೆ. ಹಾಲಿ ಇರುವ ವ್ಯವಸ್ಥೆಯಲ್ಲಿ ಈ ಉತ್ಪನ್ನಗಳ ತೆರಿಗೆ ದರ ಕಡಿಮೆ ಇದೆ. ಆದರೆ ಇದೇ ಗುಂಪಿನಲ್ಲಿರುವ ವನಸ್ಪತಿ, ಬೆಣ್ಣೆ, ತುಪ್ಪ, ಟ್ಯಾಕ್ಸಿ ಹಾಗೂ ಆಟೊ ರಿಕ್ಷಾ ದರ, ಕಾಫಿ ಪುಡಿಯ ಮೇಲೆ ಈಗ ಶೇಕಡ 7 ರಿಂದ 9ರವರೆಗೆ ತೆರಿಗೆ ಇದ್ದು, ಈ ಸರಕು ಹಾಗೂ ಸೇವೆಗಳ ತೆರಿಗೆ ದರ ಶೇಕಡ 6ಕ್ಕೆ ಕಡಿಮೆಯಾಗಲಿದೆ.
ಗ್ರಾಹಕ ಸೂಚ್ಯಂಕ ಪಟ್ಟಿಯಲ್ಲಿರುವ ಕೆಲ ವಸ್ತುಗಳಿಗೆ ಈಗ ಶೇಕಡ 25ಕ್ಕಿಂತ ಅಧಿಕ ಪ್ರಮಾಣದ ತೆರಿಗೆ ಇದ್ದು, ಬಹುತೇಕ ಈ ವಸ್ತುಗಳ ತೆರಿಗೆ ಕಡಿಮೆಯಾಗಲಿದೆ. ಇಂಥ 50 ಉತ್ಪನ್ನಗಳ ಬೆಲೆ ಸರಾಸರಿ 38ರಷ್ಟಿದ್ದು, ಇದು ಶೇಕಡ 26ಕ್ಕೆ ಇಳಿಯಲಿದೆ.
ಕಾರು ಹಾಗೂ ಜೀಪಿನ ಮೇಲಿನ ತೆರಿಗೆ ಶೇಕಡ 31ರಿಂದ 26ಕ್ಕೆ ಇಳಿಯಲಿದೆ. ಮೋಟರ್‌ಬೈಕ್ ಮೇಲಿನ ತೆರಿಗೆ ಶೇಕಡ 28ರಿಂದ 26ಕ್ಕೆ ಕಡಿಮೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News