ದೇವಾಲಯಗಳಲ್ಲಿ ನೀವು ಅರ್ಪಿಸುವ ಕೂದಲು ಎಲ್ಲಿಗೆ ಹೋಗಿ ತಲುಪುತ್ತದೆ?

Update: 2016-10-21 12:22 GMT

ಮಕ್ಕಳ ಮೊದಲ ತಲೆಗೂದಲು ತೆಗೆಯುವುದರಿಂದ ಆರಂಭಿಸಿ ಸತ್ತ ವ್ಯಕ್ತಿಗೆ ಅಂತ್ಯಕ್ರಿಯೆ ನಡೆಸಿದ ಮೇಲೆಯೂ ಸಹ ಭಾರತದಲ್ಲಿ ಕೂದಲು ತೆಗೆಸುವ ಹರಕೆಯ ಪರಂಪರೆ ವಿಶಿಷ್ಟವಾಗಿ ಬೆಳೆದುಬಂದಿದೆ. ದೇಶದ ಹಲವು ದೇವಸ್ಥಾನಗಳಲ್ಲಿ ಹೀಗೆ ಕೂದಲು ತೆಗೆಸುವ ಹರಕೆ ಇದೆ. ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿಯ ತಿಮ್ಮಪ್ಪನ ದೇವಸ್ಥಾನದಿಂದ ಆರಂಭಿಸಿ ಹಲವು ದೇವಾಲಯಗಳಲ್ಲಿ ಇಷ್ಟಾರ್ಥ ನೆರವೇರಿದ್ದಕ್ಕಾಗಿ ಕೂದಲು ಕೊಡುವ ಪರಂಪರೆ ಇದೆ. ಇಂಥಾ ದೊಡ್ಡ ದೇವಾಲಯಗಳಲ್ಲಿ ಪ್ರತೀ ದಿನ ಅಸಂಖ್ಯಾತ ಟನ್‌ಗಳಷ್ಟು ಕೂದಲು ಸಂಗ್ರಹವಾಗುತ್ತದೆ. ಈ ದೇವಾಲಯಗಳಿಗೆ ಕೂದಲು ಕೊಟ್ಟು ಲಕ್ಷಾಂತರ ಲಾಭವಾಗಿದೆ ಎಂದು ಹರಕೆ ಹೊತ್ತವರು ಹೇಳುವುದನ್ನು ಕೇಳಿರಬಹುದು. ಆದರೆ ಹೀಗೆ ಕತ್ತರಿಸಿದ ಕೂದಲು ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದನ್ನು ಯಾರು ಬಳಸುತ್ತಾರೆ? ಇದನ್ನು ಬಳಸಲು ಯೋಗ್ಯವಾಗಿಸುವುದು ಹೇಗೆ? ಅಲ್ಲದೆ ಈ ಕೂದಲುಗಳು ಲಂಡನ್ ಅಥವಾ ಇತರ ಪಶ್ಚಿಮ ದೇಶಗಳ ಮಾರುಕಟ್ಟೆ ಪ್ರವೇಶಿಸುವುದು ಹೇಗೆ?

ಈ ಕೂದಲುಗಳ ಲಂಡನ್ ಯಾತ್ರೆಯ ಮೊದಲ ಭಾಗ ಕೂದಲು ದಾನ ಮಾಡಿದ ದೇವಾಲಯದಲ್ಲೇ ಆರಂಭವಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕೂದಲುಗಳಿಗೆ ಹೆಚ್ಚು ಬೆಲೆ ಸಿಗುತ್ತದೆ. ಏಕೆಂದರೆ ಇದನ್ನು ವರ್ಜಿನ್ ಹೇರ್ (ಉತ್ತಮ ಗುಣಮಟ್ಟದ) ಎಂದು ಹೇಳಲಾಗುತ್ತದೆ. ಇವುಗಳನ್ನು ವರ್ಜಿನ್ ಎಂದು ಹೇಳುವ ಹಿಂದೆಯೂ ಒಂದು ಕಾರಣವಿದೆ. ಬಹಳಷ್ಟು ಭಾರತೀಯರು ತಮ್ಮ ಕೂದಲಿಗೆ ಬಣ್ಣ ಬಳಿಯುವುದು ಅಥವಾ ಇನ್ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ದೇವಾಲಯಗಳಲ್ಲಿ ಕೂದಲು ಅರ್ಪಿಸುವವರು ಬಹಳ ಕೆಳವರ್ಗ, ಮಧ್ಯಮವರ್ಗದವರು. ಇವರು ಹೇರ್ ಸ್ಟೈಲಿಂಗ್ ಕೂಡ ಮಾಡುವುದಿಲ್ಲ. ಹೀಗಾಗಿ ಇವರ ಕೂದಲು ಬಹುತೇಕ ನೈಸರ್ಗಿಕವಾಗಿರುತ್ತದೆ. ಅಲ್ಲದೆ ಬಾಲ್ಯದಲ್ಲಿ ಬೆಳೆಸಿದ ಮೊದಲ ಕೂದಲಿನಲ್ಲಿ ಕೆರೋಟಿನ್ ಅಂಶ ಹೆಚ್ಚಾಗಿರುತ್ತದೆ. ಈ ಪ್ರೊಟೀನ್ ಕಾರಣದಿಂದ ಕೂದಲು ಆರೋಗ್ಯಕರವಾಗಿರುತ್ತದೆ. ಇದೇ ಕಾರಣದಿಂದ ಇವುಗಳನ್ನು ವರ್ಜಿನ್ ಹೇರ್ ಎನ್ನಲಾಗುತ್ತದೆ.

ದೇವಾಲಯದಲ್ಲಿ ಅರ್ಪಿಸಿದ ಕೂದಲುಗಳನ್ನು ಪ್ರೊಸೆಸಿಂಗ್‌ಗಾಗಿ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ಪ್ರೊಸೆಸಿಂಗ್‌ನ ಮೊದಲ ಭಾಗವಾಗಿ ಅವುಗಳನ್ನು ಕೈಗಳಿಂದ ಬಿಡಿಸಲಾಗುತ್ತದೆ. ಕೈಗಳಿಂದ ಲಕ್ಷಾಂತರ ಟನ್ ಕೂದಲುಗಳನ್ನು ಬಿಡಿಸುವುದು ಬಹಳ ಕಷ್ಟ ಮತ್ತು ಧೀರ್ಘ ಪ್ರಕ್ರಿಯೆಯಾಗಿದೆ. ಕಾರ್ಖಾನೆಗಳಲ್ಲಿ ತೆಳುವಾದ ಸೂಜಿಗಳ ನೆರವಿನಿಂದ ಕಾರ್ಮಿಕರು ಇದನ್ನು ಬಿಡಿಸುತ್ತಾರೆ. ನಂತರ ಈ ಕೂದಲು ಪ್ರೊಸೆಸಿಂಗ್‌ನ ಮುಂದಿನ ಹಂತಕ್ಕೆ ಸಿದ್ಧವಾಗುತ್ತದೆ.

ಬಿಡಿಸಿದ ಮೇಲೆ ಈ ಕೂದಲುಗಳನ್ನು ಲೋಹದ ಒಂದು ತುಂಡಿನಿಂದ ಹೊಡೆದು ಸ್ವಚ್ಛಗೊಳಿಸಲಾಗುತ್ತದೆ. ಅದರ ನಂತರ ಇವುಗಳನ್ನು ಅವುಗಳ ಉದ್ದಕ್ಕೆ ಅನುಸಾರವಾಗಿ ವಿಭಿನ್ನ ಬಂಡಲ್‌ಗಳಲ್ಲಿ ಕಟ್ಟಲಾಗುತ್ತದೆ. ಇದರ ನಂತರ ಕೂದಲುಗಳ ಈ ಬಂಡಲ್‌ಗಳನ್ನು ಕೀಟಾಣುರಹಿತವನ್ನಾಗಿ ಮಾಡಲು ಡೈಲ್ಯೂಟ್ ಆಗಿರುವ ಆಸಿಡ್ ದ್ರಾವಣದಲ್ಲಿ ಮುಳುಗಿಸಲಾಗುತ್ತದೆ. ಸ್ವಚ್ಛ ಮಾಡಿದ ಕೂದಲುಗಳನ್ನು ಎಲ್ಲಕ್ಕಿಂತ ಶ್ರೇಷ್ಠವಾದ ಕೂದಲುಗಳಿಗೆ ಆಸ್ಮೋಸಿಸ್ ಬಾತ್ ಮಾಡಲಾಗುತ್ತದೆ. ಆ ಮೂಲಕ ಅವುಗಳ ಕ್ಯುಟಿಕಲ್ಸ್ ನಷ್ಟವಾಗದೆಯೇ ಅವುಗಳಿಗೆ ಅಂಟಿದ ಕೊಳೆಯನ್ನು ನಿವಾರಿಸಲಾಗುತ್ತದೆ. ಈ ಸ್ವಚ್ಛ ಮತ್ತು ಶುದ್ಧ ಕೂದಲುಗಳಿಂದ ಮಹಿಳೆಯರು ಮತ್ತು ಪುರುಷರಿಗಾಗಿ ರಂಗು ರಂಗಿನ ವಿಗ್ ತಯಾರಿಸಲಾಗುತ್ತದೆ. ಇವುಗಳ ಬೇಡಿಕೆ ಹೆಚ್ಚಾಗಿರುವ ದೇಶಗಳಲ್ಲಿ ವಿಗ್‌ಗಳು ಮಾರಾಟವಾಗುತ್ತವೆ.

ಹಲವು ಸಲ ಕಡಿಮೆ ಬೆಲೆ ಇರುವ ವಿಗ್ ಕೊಂಡಲ್ಲಿ, ಮಾನವ ಕೂದಲುಗಳ ಜೊತೆಗೆ ಅದರಲ್ಲಿ ಕತ್ತೆ ಅಥವಾ ಕುರಿಯ ಕೂದಲುಗಳೂ ಸೇರಿರುತ್ತವೆ. ಇದನ್ನು ಹೊರತುಪಡಿಸಿ ಅಸಲಿ ಕೂದಲೆಂದು ಹೇಳಿ ಸಿಂತೆಟಿಕ್ ಕೂದಲನ್ನೂ ಮಾರಲಾಗುತ್ತದೆ. ಆದರೆ ಉತ್ತಮ ಗುಣಮಟ್ಟದ ಅಸಲಿ ಮಾನವ ಕೂದಲುಗಳಿಂದ ತಯಾರಾದ ವಿಗ್‌ಗೆ ಅಂತಾರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿದೆ. ಅಂಗಡಿಯವರು ಉತ್ತಮ ಗುಣಮಟ್ಟದ ವಿಗ್‌ಗೆ 10 ಸಾವಿರ ಕೇಳಿದರೆ ಅದು ದುಬಾರಿ ಎಂದೇನೂ ತಿಳಿದುಕೊಳ್ಳಬೇಡಿ. ಇದರ ಬೆಲೆಯಿಂದಾಗಿಯೇ ಅಂತಾರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳಷ್ಟು ಬಾರಿ ಇದನ್ನು ಕಪ್ಪು ಚಿನ್ನ ಎಂದೂ ಹೇಳಲಾಗುತ್ತದೆ.

ಕೃಪೆ: http://www.jansatta.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News