ಒಂದೇ ವರ್ಷದಲ್ಲಿ ಮುಖ್ಯ ಆರೋಪಿ ಗಳಿಸಿದ್ದು ಎಷ್ಟು ಸಾವಿರ ಕೋಟಿ ಗೊತ್ತೇ?

Update: 2016-10-22 03:18 GMT

ಅಹ್ಮದಾಬಾದ್, ಅ.22: ಬಹುಕೋಟಿ ಕಾಲ್ ಸೆಂಟರ್ ಹಗರಣ ಎಲ್ಲ ಊಹೆಗಳನ್ನೂ ಮೀರಿ ದೈತ್ಯ ಪ್ರಮಾಣದ್ದಾಗಿದ್ದು, ಅಹ್ಮದಾಬಾದ್ ನಗರವೊಂದರಲ್ಲೇ ಸುಮಾರು ಒಂದು ಸಾವಿರ ಕೋಟಿ ಮೌಲ್ಯದ ಅವ್ಯವಹಾರ ನಡೆದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಅಕ್ರಮ ಕಾಲ್‌ಸೆಂಟರ್ ಹಗರಣ ಸುಮಾರು 500 ಕೋಟಿ ರೂಪಾಯಿ ಅವ್ಯವಹಾರವನ್ನು ಒಳಗೊಂಡದ್ದು ಎಂದು ಥಾಣೆ ಪೊಲೀಸರು ಅಂದಾಜು ಮಾಡಿದ್ದರು. ಆದರೆ ಈ ಪ್ರಮಾಣಕ್ಕಿಂತ ದುಪ್ಪಟ್ಟು ಅವ್ಯವಹಾರ ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಆರೋಪಿ ಸಾಗರ್ ಠಾಕೂರ್, ಅಹ್ಮದಾಬಾದ್‌ನಲ್ಲೇ 70ಕ್ಕೂ ಹೆಚ್ಚು ಕಾಲ್ ಸೆಂಟರ್ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾಲ್ ಸೆಂಟರ್‌ಗಳಿಂದ ಅಮೆರಿಕನ್ ಪ್ರಜೆಗಳಿಗೆ ಕರೆ ಮಾಡಿ, ಆಂತರಿಕ ಕಂದಾಯ ಸೇವಾ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಬೆದರಿಕೆ ಹಾಕಿ ಲಕ್ಷಾಂತರ ಡಾಲರ್ ವಂಚಿಸುತ್ತಿತ್ತು ಎನ್ನಲಾಗಿದೆ. ವಡೋದರ ಹಾಗೂ ಮೆಹ್ಸಾನಾದಲ್ಲೂ ಈತ ಕಾಲ್ ಸೆಂಟರ್ ಹೊಂದಿದ್ದ. ಪ್ರತಿ ಕಾಲ್‌ಸೆಂಟರ್‌ಗಳ ವಾರ್ಷಿಕ ಆದಾಯ ಸುಮಾರು 2 ಕೋಟಿ ಆಗಿತ್ತು, ಥಾಣೆ ಪೊಲೀಸರು ಅನುಮಾನದ ಮೇಲೆ ಮುಂಬೈ ಕಾಲ್‌ಸೆಂಟರ್ ಮೇಲೆ ದಾಳಿ ಮಾಡಿದಾಗ, ಅಹ್ಮದಾಬಾದ್‌ನ 70 ಕಾಲ್‌ಸೆಂಟರ್‌ಗಳ ಪೈಕಿ 55ನ್ನು ಆರೋಪಿ ಮುಚ್ಚಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News