ಅಭಿಜಿತ್ ಗುಪ್ತಾ ಐತಿಹಾಸಿಕ ಸಾಧನೆ

Update: 2016-10-23 18:28 GMT

ಹೊಸದಿಲ್ಲಿ, ಅ.23: ಗ್ರಾಂಡ್‌ಮಾಸ್ಟರ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಅಭಿಜಿತ್ ಗುಪ್ತಾ ಹೂಗೇವೀನ್ ಇಂಟರ್‌ನ್ಯಾಶನಲ್ ಚೆಸ್ ಟೂರ್ನಮೆಂಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಹಾಲೆಂಡ್‌ನ ಹೂಗೇವೀನ್‌ನಲ್ಲಿ ನಡೆದ ಫಿಡೆ ಓಪನ್‌ನಲ್ಲಿ ಸತತ ಎರಡನೆ ಬಾರಿ ಪ್ರಶಸ್ತಿ ಎತ್ತಿ ಹಿಡಿದ ಅಭಿಜಿತ್ ಈ ಸಾಧನೆ ಮಾಡಿದ ಮೊದಲ ಚೆಸ್ ಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಹಾಲಿ ಚಾಂಪಿಯನ್ ಅಭಿಜಿತ್ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುವ ಮೂಲಕ 9ರಲ್ಲಿ 7.5 ಅಂಕವನ್ನು ಗಳಿಸಿ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡರು. ಭಾರತೀಯರ ಪ್ರಾಬಲ್ಯಕ್ಕೆ ಸಾಕ್ಷಿಯಾದ ಪ್ರಸ್ತುತ ಚೆಸ್ ಟೂರ್ನಿಯಲ್ಲಿ ಗ್ರಾಂಡ್‌ಮಾಸ್ಟರ್ ಸಂದೀಪನ್ ಚಂದ್ ಎರಡನೆ ಸ್ಥಾನ ಪಡೆದರು. ಮೂರನೆ ಹಾಗೂ ನಾಲ್ಕನೆ ಸ್ಥಾನವನ್ನು ಕ್ರಮವಾಗಿ ಜಿಎಂ ಎಂ.ಆರ್. ಲಲಿತ್ ಬಾಬು ಹಾಗೂ ಜಿಎಂ ಎಂ.ಶ್ಯಾಮ್ ಸುಂದರ್ ಪಡೆದಿದ್ದಾರೆ.

ಸತತ ನಾಲ್ಕು ಗೆಲುವು ಸಾಧಿಸಿದ ಅಭಿಜಿತ್ ಉತ್ತಮ ಆರಂಭ ಪಡೆದಿದ್ದು, ಲಲಿತ್ ಬಾಬು ವಿರುದ್ಧ ಡ್ರಾ ಸಾಧಿಸಿ ದೀರ್ಘಕಾಲದ ವಿನ್ನರ್ ಎನಿಸಿಕೊಂಡರು.

ಆರನೆ ಸುತ್ತಿನಲ್ಲಿ ಮೈಕಲ್ ಡಿ ಜಾಂಗ್ ವಿರುದ್ಧ ಜಯ ಸಾಧಿಸಿರುವ ಲಲಿತ್ ಏಳನೆ ಸುತ್ತಿನಲ್ಲಿ ಎಸ್. ನಿತಿನ್ ವಿರುದ್ಧ ಸುಲಭ ಜಯ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News