ಹಿಜಾಬ್ ಧರಿಸಿದ್ದಕ್ಕೆ ಕೆಲಸದಿಂದ ಸ್ವಿಸ್ ಮಹಿಳೆ ವಜಾ : ಪರಿಹಾರ ನೀಡಲು ನ್ಯಾಯಾಲಯ ಆದೇಶ

Update: 2016-10-24 15:47 GMT

ಜಿನೇವ (ಸ್ವಿಝರ್‌ಲ್ಯಾಂಡ್), ಅ. 24: ಶಿರವಸ್ತ್ರವನ್ನು ಧರಿಸಲು ಆರಂಭಿಸಿದ ದೀರ್ಘಕಾಲೀನ ಸೇವೆ ಸಲ್ಲಿಸಿರುವ ಮುಸ್ಲಿಮ್ ಮಹಿಳೆಯೊಬ್ಬರನ್ನು ಕೆಲಸದಿಂದ ವಜಾಗೊಳಿಸಿದ ಕಂಪೆನಿಯ ವಿರುದ್ಧ ಸ್ವಿಝರ್‌ಲ್ಯಾಂಡ್‌ನ ನ್ಯಾಯಾಲಯವೊಂದು ತೀರ್ಪು ನೀಡಿದೆ.


29 ವರ್ಷದ ಸರ್ಬಿಯನ್ ಮಹಿಳೆಯನ್ನು ಡ್ರೈ ಕ್ಲೀನಿಂಗ್ ಉದ್ಯಮದ ಕಂಪೆನಿಯೊಂದು ಕೆಲಸದಿಂದ ವಜಾಗೊಳಿಸಿತ್ತು.
ಅವರನ್ನು ಕೆಲಸದಿಂದ ತೆಗೆದ ಅವಧಿಯ ವೇತನ ಮತ್ತು ಪರಿಹಾರ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.
ಆಬಿದಾ ಎಂಬ ಮಹಿಳೆಯನ್ನು 2015 ಜನವರಿಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿತ್ತು.


ಕಂಪೆನಿಯು ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರದ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದೆ ಎಂದು ಬರ್ನ್‌ನ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News