×
Ad

ಬಾಹ್ಯಾಕಾಶದಲ್ಲಿ ತರಕಾರಿ ನೆಟ್ಟ ಗಗನಯಾನಿಗಳು!

Update: 2016-10-26 22:52 IST

ವಾಶಿಂಗ್ಟನ್, ಅ. 26: ಬಾಹ್ಯಾಕಾಶದಲ್ಲಿ ತಾಜಾ ಆಹಾರವನ್ನು ಹೇಗೆ ಬೆಳೆಸುವುದು ಎಂಬುದನ್ನು ತಿಳಿದುಕೊಳ್ಳಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ‘ಲೆಟ್ಯೂಸ್’ ಎಂಬ ಎಲೆ ತರಕಾರಿಯನ್ನು ನಾಸಾ ನಾಟಿ ಮಾಡಿದೆ.

ಭವಿಷ್ಯದಲ್ಲಿ ಮಂಗಳನಲ್ಲಿಗೆ ಹೋಗುವ ಮಾನವರನ್ನು ತಯಾರು ಮಾಡಲು ಇದರಿಂದ ಪ್ರಯೋಜನವಾಗಬಹುದು ಎಂದು ನಂಬಲಾಗಿದೆ.

ಭೂಮಿಯಲ್ಲಿ ಚಳಿಗಾಲದ ಅವಧಿಯಲ್ಲಿ ರೈತರು ಲೆಟ್ಯೂಸ್ ತರಕಾರಿಯನ್ನು ಬೆಳೆಸುವ ಹಾಗೆ ಬಾಹ್ಯಾಕಾಶ ನಿಲ್ದಾಣದಲ್ಲಿರುವ ವಿಜ್ಞಾನಿಗಳು ಕೆಂಪು ರೊಮೈನ ಲೆಟ್ಯೂಸನ್ನು ನಿಲ್ದಾಣದಲ್ಲಿ ನೆಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News