ಪೇಸ್-ರಾಮ್‌ಕುಮಾರ್‌ಗೆ ಸೋಲು

Update: 2016-10-28 18:09 GMT

 ಪುಣೆ, ಅ.28: ದ್ವಿತೀಯ ಶ್ರೇಯಾಂಕದ ಲಿಯಾಂಡರ್ ಪೇಸ್ ಹಾಗೂ ರಾಮ್‌ಕುಮಾರ್ ರಾಮನಾಥನ್ ಕೆಪಿಐಟಿ-ಎಂಎಸ್‌ಎಲ್‌ಟಿಎ ಎಟಿಪಿ ಚಾಲೆಂಜರ್ಸ್‌ನ ಎರಡನೆ ಸುತ್ತಿನಲ್ಲಿ ಎಡವುವ ಮೂಲಕ ಭಾರತ ತೀವ್ರ ಹಿನ್ನಡೆ ಅನುಭವಿಸಿತು.

ಗುರುವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಪೇಸ್-ರಾಮ್‌ಕುಮಾರ್ ಜೋಡಿ ಶ್ರೇಯಾಂಕರಹಿತ ಫ್ರೆಂಚ್-ಸ್ವಿಸ್ ಜೋಡಿ ಹ್ಯೂಗೊ ನಿಸ್ ಹಾಗೂ ಲುಕಾ ಮಾರ್ಗರಾಲಿ ವಿರುದ್ಧ 6-2, 3-6, 4-10 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

 ಪೇಸ್-ರಾಮ್‌ಕುಮಾರ್ ಮೊದಲ ಸೆಟ್‌ನ್ನು 6-2 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಎರಡನೆ ಸೆಟ್‌ನಲ್ಲಿ ಪೇಸ್-ರಾಮ್ ತೀವ್ರ ಪೈಪೋಟಿ ನೀಡಿದರೂ 3-6 ಅಂತರದಿಂದ ಸೋತರು. ಆದರೆ, ಮೂರನೆ ಸೆಟ್‌ನಲ್ಲಿ ಹೆಚ್ಚು ಹೋರಾಟ ನೀಡದೆ 4-10 ಅಂತರದಿಂದ ಶರಣಾಗಿ ನಿರಾಸೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News