×
Ad

ವಿಂಡೀಸ್‌ ವಿರುದ್ಧ ಸರಣಿಯಲ್ಲಿ ವಿಶ್ವ ದಾಖಲೆಯತ್ತ ಪಾಕ್‌ ಚಿತ್ತ

Update: 2016-10-29 22:10 IST

ಶಾರ್ಜಾ, ಅ.29:ಪಾಕಿಸ್ತಾನ ತಂಡ  ಇಲ್ಲಿ ರವಿವಾರ ಆರಂಭಗೊಳ್ಳಲಿರುವ ಮೂರನೆ ಹಾಗೂ ಅಂತಿಮ ಟೆಸ್ಟ್ ನಲ್ಲಿ ವಿಂಡೀಸ್‌ ನ್ನು ಎದುರಿಸಲಿದ್ದು,  ಪಾಕಿಸ್ತಾನ 9-0 ಗೆಲುವಿನೊಂದಿಗೆ ಇತಿಹಾಸ ಬರೆಯುವ ಕನಸು ಕಾಣುತ್ತಿದೆ.
ಪಾಕಿಸ್ತಾನ ಟ್ವೆಂಟಿ-20 ಮತ್ತು ಏಕದಿನ  ಸರಣಿಯಲ್ಲಿ ತಲಾ 3-0 ಅಂತರದಲ್ಲಿ ಗೆಲುವು ಸಾಧಿಸಿತ್ತು.  ದುಬೈನಲ್ಲಿ ಮೊದಲ ಟೆಸ್ಟ್‌ನಲ್ಲಿ 56 ರನ್‌ ಮತ್ತು ಎರಡನೆ ಟೆಸ್ಟ್‌ನಲ್ಲಿ 133 ರನ್‌ಗಳ ಜಯ ಗಳಿಸಿ 2-0 ಮುನ್ನಡೆ ಸಾಧಿಸಿದೆ. ಇನ್ನೊಂದು ಟೆಸ್ಟ್‌ ನಲ್ಲಿ ಜಯಿಸಿದರೆ ಐತಿಹಾಸಿಕ ಗೆಲುವು ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News