ಹಿಲರಿ ರಕ್ಷಣೆಗೆ ನ್ಯಾಯಾಂಗ ಇಲಾಖೆ?

Update: 2016-10-30 17:36 GMT

ವಾಶಿಂಗ್ಟನ್,ಆ.30: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್ ಅವರ ಇಮೇಲ್ ಹಗರಣಕ್ಕೆ ಸಂಬಂಧಿಸಿ ಹೊಸತಾಗಿ ತನಿಖೆ ಆರಂಭಿಸಲಾಗಿರುವ ಬಗ್ಗೆ ಅಮೆರಿಕ ಕಾಂಗ್ರೆಸ್‌ಗೆ ಮಾಹಿತಿ ನೀಡಬಾರದೆಂದು ಅಮೆರಿಕ ನ್ಯಾಯಾಂಗ ಇಲಾಖೆಯು, ದೇಶದ ತನಿಖಾ ಸಂಸ್ಥೆ ಎಫ್‌ಬಿಐಗೆ ಸಲಹೆ ನೀಡಿತ್ತೆಂಬುದನ್ನು ಎಫ್‌ಬಿನ ಉನ್ನತ ಅಧಿಕಾರಿಯೊಬ್ಬರು ಆಪಾದಿಸಿದ್ದಾರೆ.

 ಹಿಲರಿ ಕ್ಲಿಂಟನ್‌ರ ಇಮೇಲ್ ಹಗರಣದ ಬಗ್ಗೆ ತನಿಖೆ ನಡೆಸುವ ಬಗ್ಗೆ ಅಮೆರಿಕ ಕಾಂಗ್ರೆಸ್‌ಗೆ ಅಧಿಸೂಚನೆ ನೀಡುವ ಎಫ್‌ಬಿಐ ನಿರ್ಧಾರದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಿದಂತಾಗುತ್ತದೆಯೆಂದು ನ್ಯಾಯಾಂಗ ಇಲಾಖೆಯು ಅಭಿಪ್ರಾಯಿಸಿತ್ತೆಂದು ಎಫ್‌ಬಿಐ ನಿರ್ದೇಶಕ ಜೇಮ್ಸ್ ಕೊಮೆ ತಿಳಿಸಿದ್ದಾರೆ. ಅವರು ಶುಕ್ರವಾರ ಅಮೆರಿಕ ಕಾಂಗ್ರೆಸ್‌ನ ಹಲವಾರು ಸದಸ್ಯರಿಗೆ ಕಳುಹಿಸಿದ ಇಮೇಲ್‌ಗಳಲ್ಲಿ ಈ ವಿಷಯವನ್ನು 

 ಈ ನಡೆಯೊಂದಿಗೆ ನ್ಯಾಯಾಂಗ ಇಲಾಖೆ ಹಾಗೂ ಎಫ್‌ಬಿಐ ನಿರ್ದೇಶಕ ಕೊಮೆ ನಡುವೆ ತೀವ್ರ ಬಿಕ್ಕಟ್ಟು ತಲೆದೋರುವ ಸಾಧ್ಯತೆಯಿದೆ. ಕೊಮೆ ಅವರು ಡೆಮೊಕ್ರಾಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳೆರಡರ ಅಧ್ಯಕ್ಷರುಗಳ ಅಧಿಕಾರಾವಧಿಗಳಲ್ಲೂ ವಿವಿಧ ಸರಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.

  ಇಮೇಲ್ ಹಗರಣಕೆ ಸಂಬಂಧಿಸಿ ಹಿಲರಿ ವಿರುದ್ಧ ಹೊಸದಾಗಿ ಎಫ್‌ಬಿಐ ತನಿಖೆ ಆರಂಭಿಸುವುದನ್ನು ಕೂಮಿ ಬಹಿರಂಗಪಡಿಸಿರುವುದು, ಎದುರಾಳಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೊಸ ಅಸ್ತ್ರವೊಂದು ದೊರೆತಂತಾಗಿದೆ.

ಅಮೆರಿಕದ ನ್ಯಾಯಾಂಗ ಇಲಾಖೆಯು ಹಿಲರಿಯ ಕ್ರಿಮಿನಲ್ ಚಟುವಟಿಕೆಗಳನ್ನು ರಕ್ಷಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ಟ್ರಂಪ್ ಆಪಾದಿಸಿದ್ದಾರೆ.

ಹಿಲರಿ ಕ್ಲಿಂಟನ್ ಅಮೆರಿಕದ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ತನ್ನ ಖಾಸಗಿ ಇಮೇಲ್‌ಗಳನ್ನು ಕಳುಹಿಸಲು ಇಲಾಖೆಯ ಇಮೇಲ್‌ಗಳನ್ನು ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿ ಎಫ್‌ಬಿಐ ತನಿಖೆ ನಡೆಸುತ್ತಿದೆ.

  ತನಿಖೆಯ ಸಂದರ್ಭದಲ್ಲಿ ಕ್ಲಿಂಟನ್ ಅವರ ನಿಕಟವರ್ತಿಗಳಲ್ಲೊಬ್ಬರಾಗಿದ್ದ ಹೂಮಾ ಅಬೆದಿನ್ ಅವರ ಪರಿತ್ಯಕ್ತ ಪತಿ ನ್ಯೂಯಾರ್ಕ್‌ನ ಮಾಜಿ ಕಾಂಗ್ರೆಸ್ ಸಂಸದ ಆ್ಯಂಥೋನಿವಿನರ್ ಹದಿಹರೆಯದ ಬಾಲಕಿಯೊಬ್ಬಳ ಜೊತೆ ನಡೆಸಿದ ಲೈಂಗಿಕ ಸಂಭಾಷಣೆಗಳನ್ನೊಳಗೊಂಡ ಇಮೇಲ್‌ಗಳು ಪತ್ತೆಯಾದ ಕಂಪ್ಯೂಟರ್ ಒಂದರಲ್ಲಿ ಹಿಲರಿಯವರ ಇಮೇಲ್‌ಗಳು ಲಭ್ಯವಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಬಿಐ ಹೊಸತಾಗಿ ತನಿಖೆಯನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News