ನವಾಝ್‌ರಿಂದ ಮೋದಿ ಹಿತಾಸಕ್ತಿ ರಕ್ಷಣೆ : ಇಮ್ರಾನ್ ಆರೋಪ

Update: 2016-10-30 17:38 GMT

ಇಸ್ಲಾಮಾಬಾದ್, ಅ.30: ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹಿತಾಸಕ್ತಿಗಳನ್ನು ಕಾಪಾಡುತ್ತಿ ದ್ದಾರೆಂದು, ಮಾಜಿ ಕ್ರಿಕೆಟಿಗ ಹಾಗೂ ತೆಹ್ರಿಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಟೀಕಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ತನ್ನ ಪಕ್ಷದ 100ಕ್ಕೂ ಅಧಿಕ ಬೆಂಬಲಿಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಬೆನ್ನಲ್ಲೇ ಅವರು ಸ್ವಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಾಗ್ದಾಳಿ ಮಾಡಿದ್ದಾರೆ.

  ‘‘ನವಾಝ್ ಶರೀಫ್ ಯಾವುದೇ ಸರ್ಜರಿಗೆ ಒಳಗಾಗಲು ಲಂಡನ್‌ಗೆ ಹೋದಾಗ ತನ್ನ ತಾಯಿ ಅಥವಾ ಮಕ್ಕಳಿಗಿಂತಲೂ ಮೊದಲು ಅವರು ಆಸ್ಪತ್ರೆಯ ಹಾಸಿಗೆಯಿಂದ ಮೋದಿಗೆ. ದೂರವಾಣಿ ಕರೆ ಮಾಡುತ್ತಾರೆ’’ ಎಂದು ಟೀಕಿಸಿದರು.

 ಪಾಕಿಸ್ತಾನದಲ್ಲಿ ನವಾಝ್, ಮೋದಿಯ ಹಿತಾಸಕ್ತಿಗಳನ್ನು ರಕ್ಷಿಸುತ್ತಿದ್ದಾರೆ. ಭದ್ರತಾಪಡೆಗಳಿಗೆ ಕಳಂಕಹಚ್ಚುವ ಎಲ್ಲಾ ಭದ್ರತಾ ಸೋರಿಕೆ ಹಗರಣಗಳ ಹಿಂದೆ ಪಾಕ್ ಪ್ರಧಾನಿಯ ಕೈವಾಡವಿದೆಯೆಂದು ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News