×
Ad

ಸಿಕ್ಕಿದರೆ ಈ ಕಂಪೆನಿಗಳಲ್ಲಿ ಕೆಲಸ ಸಿಗಬೇಕು. ಏನು ಅಷ್ಟೊಂದು ವಿಶೇಷ ಗೊತ್ತೇ ?

Update: 2016-11-03 13:25 IST

ಪಾರ್ಕಿಂಗ್‌ಗೆ ಜಾಗವಿಲ್ಲವೆ? ಮನೆಯಿಂದಲೇ ಕೆಲಸ ಮಾಡಿ

ಇಲೆಕ್ಟ್ರಾನಿಕ್ಸ್ ಕಂಪೆನಿ ಫಿಲಿಪ್ಸ್ ಸಿಬ್ಬಂದಿಗಳು ವಾಹನ ಚಲಾಯಿಸಿ ಬಂದಾಗ ಪಾರ್ಕಿಂಗ್‌ಗೆ ಅವಕಾಶವಿಲ್ಲ ಎಂದರೆ ಮನೆಗೆ ಹೋಗಿ ಅಲ್ಲಿಂದಲೇ ಕೆಲಸ ಮಾಡುವ ಅವಕಾಶ ಕೊಡುತ್ತದೆ. ಪಾರ್ಕಿಂಗ್ ಹುಡುಕುವುದಕ್ಕಿಂತ ಮನೆಯಿಂದಲೇ ವೇಗವಾಗಿ ಲಾಗಿನ್ ಮಾಡಬಹುದು ಎನ್ನುವುದು ಸಂಸ್ಥೆಯ ಉದ್ದೇಶ. ಸಿಬ್ಬಂದಿಗಳು ಬೆಳಗಿನ ಜಾವ 8ರಿಂದ ಮಧ್ಯಾಹ್ನ 1 ಗಂಟೆಯೊಳಗೆ ಕಚೇರಿಗೆ ಬರಬಹುದು. ರಸ್ತೆ ಅಡಚಣೆಗಳು, ಬ್ಲಾಕ್‌ಗಳು ಮತ್ತು ಸಾರಿಗೆ ಸಲಹೆಗಳನ್ನು ಕೇಳಿದ ಮೇಲೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಬ್ಬಂದಿಗಳಿಗಿದೆ. ಸಾರಿಗೆ ಸಮಸ್ಯೆ ಪರಿಹಾರವಾದ ಮೇಲೆ ಅವರು ಕಚೇರಿಗೆ ಬರಬಹುದು.

ಫ್ಯೂಚರ್ ಗ್ರೂಪ್‌ನಲ್ಲಿ ಸಾರಿಗೆಯೇ ಕೆಲಸದ ವೇಳೆ ನಿರ್ಧರಿಸುತ್ತದೆ

ಮುಂಬೈ ಮೂಲದ ರಿಟೇಲರ್ ಫ್ಯೂಚರ್ ಗ್ರೂಪ್ ವಿಖ್ರೊಲಿಯಲ್ಲಿ ಕಚೇರಿ ತೆರೆದಾಗ ಸಾರಿಗೆಯೇ ಅವರ ಕಚೇರಿಯ ವೇಳೆ ನಿರ್ಧರಿಸಿತ್ತು. ಬೆಳಗ್ಗೆ 8.30ರಿಂದ 10:30ರೊಳಗೆ ಕಚೇರಿಗೆ ಬಂದು ಎಂಟು ಗಂಟೆ ಕೆಲಸ ಮಾಡಿ ಹೋಗುವ ಅವಕಾಶ ಕೊಡಲಾಗಿದೆ. ಫ್ಲೆಕ್ಸಿ ಟೈಮಿಂಗ್ ಕೊಟ್ಟು ಸಿಬ್ಬಂದಿಗಳಿಗೆ ಸಾರಿಗೆ ಸಮಸ್ಯೆಯಿಂದ ಬಚಾವ್ ಮಾಡಿದ್ದೇವೆ ಎನ್ನುತ್ತಾರೆ ಕಂಪೆನಿಯ ಸಿಬ್ಬಂದಿ ಮುಖ್ಯಸ್ಥ ಕೌಸ್ತುಬ್ ಸೋನಾಲ್ಕರ್.

ಸ್ಯಾಪ್ ಲ್ಯಾಬ್ಸ್: ಬೇಕಾದಾಗ ಬಂದು ಹೋಗಿ

ಬೆಂಗಳೂರಿನ ಸ್ಯಾಪ್ ಲ್ಯಾಬ್ ಸಿಬ್ಬಂದಿಗಳ ಆಗಮನ ಮತ್ತು ತೆರಳುವ ಸಮಯದ ಬಗ್ಗೆ ಚಿಂತಿಸುವುದಿಲ್ಲ. ಯಾವಾಗ ಕೆಲಸ ಮಾಡಬೇಕು ಮತ್ತು ಬಿಡಬೇಕು ಎನ್ನುವುದು ಸಿಬ್ಬಂದಿಗಳ ನಿರ್ಧಾರಕ್ಕೆ ಬಿಡಲಾಗಿದೆ. ವಾರಕ್ಕೊಮ್ಮೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನೂ ಸ್ಯಾಪ್ ಸಿಬ್ಬಂದಿಗಳಿಗೆ ಕೊಟ್ಟಿದೆ. ಉದ್ಯೋಗಿಗಳು ಎಷ್ಟು ಸಮಯ ಕೆಲಸದಲ್ಲಿ ಕಳೆಯುತ್ತಾರೆ ಎನ್ನುವುದಕ್ಕಿಂತ ಅವರು ಏನು ಕೆಲಸ ಮಾಡಿದ್ದಾರೆ ಎನ್ನುವುದು ಮುಖ್ಯ ಎನ್ನುವುದು ಸ್ಯಾಪ್ ಲ್ಯಾಬ್ಸ್ ವಕ್ತಾರರ ಅಭಿಪ್ರಾಯ.

ಪ್ರೈಸ್‌ವಾಟರ್ ಹೌಸ್ ಕೂಪರ್ಸ್‌ ಇಂಡಿಯಾದ ಸಿಬ್ಬಂದಿ ಸ್ನೇಹಿ ಪರಿಸರ

ಪ್ರೈಸ್‌ವಾಟರ್ ಹೌಸ್ ಕೂಪರ್ಸ್‌ ಇಂಡಿಯಾ ಮುಂಬೈನಲ್ಲಿ ಮೂರನೇ ಕಚೇರಿ ತೆರೆದಾಗ ನಗರದ ಪಶ್ಚಿಮ ಭಾಗದ ಗೋರೆಗಾಂವ್‌ವನ್ನು ಆರಿಸಿಕೊಂಡಿತ್ತು. ಎನ್‌ಸಿಆರ್‌ನಲ್ಲಿ ಇದೇ ಸಂಸ್ಥೆ ನೋಯ್ಡೆದಲ್ಲಿ ಜಾಗ ಗುರುತಿಸಿದೆ. "ನಮ್ಮ ಸಿಬ್ಬಂದಿಗಳು ಕೆಲಸ-ಮನೆ ಸಮತೋಲನ ಕಾಪಾಡಬೇಕು ಎಂದು ಬಯಸುತ್ತೇವೆ. ಇಲ್ಲದಿದ್ದರೆ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತದೆ" ಎನ್ನುವುದು ಪ್ರೈಸ್‌ವಾಟರ್ ಹೌಸ್ ಕೂಪರ್ಸ್‌ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಜಗಜೀತ್ ಸಿಂಗ್ ಅಭಿಪ್ರಾಯ.

ಕೋಕ ಕೋಲಾ: ಫ್ಲೆಕ್ಸಿ ಕಾರ್ಯಾವಧಿ

ಕೋಕ ಕೋಲಾ ಮತ್ತು ಸೇಪಿಯಂಟ್ ಶಾಖೆಗಳು ಫ್ಲೆಕ್ಸಿ ಕಾರ್ಯಾವಧಿಯನ್ನು ತಮ್ಮ ಉದ್ಯೋಗಿಗಳಿಗೆ ಆರಂಭಿಸಿದೆ. ಸಾರಿಗೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. "ನಾವು 30 ನಿಮಿಷ ಮೊದಲು 8.30ಕ್ಕೆ ಕಚೇರಿ ಆರಂಭಿಸಿ 5.15ಕ್ಕೇ ಸಿಬ್ಬಂದಿಗಳನ್ನು ಬಿಡುತ್ತೇವೆ. ಹೀಗೆ ಸಾರಿಗೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ" ಎನ್ನುತ್ತಾರೆ ಕೋಕಕೋಲ ಸಂಸ್ಥೆಯ ಮಾನವ ಸಂಪನ್ಮೂಲ ಉಪಾಧ್ಯಕ್ಷ ಸಮೀರ್ ವಾಧವನ್.

ಕೆಪಿಎಂಜಿ ಭಾರತ: ಎಲ್ಲಿಂದ ಬೇಕಾದರೂ ಕೆಲಸ

ಕೆಪಿಎಂಜಿ ಭಾರತ ಸಿಬ್ಬಂದಿಗಳನ್ನು ಎಲ್ಲಿಂದ ಬೇಕಾದರೂ ಕೆಲಸ ಮಾಡಲು ಅವಕಾಶ ಕೊಟ್ಟಿದೆ. ಗ್ರಾಹಕರ ಸ್ಥಳ, ಮನೆ ಅಥವಾ ಇನ್ನೆಲ್ಲಿಂದ ಬೇಕಾದರೂ ಕೆಲಸ ಮಾಡಬಹುದು. ಆದರೆ ಕಾರ್ಯವೈಖರಿ ಮತ್ತು ಸಮಯ ನಷ್ಟವಾಗಬಾರದು ಎನ್ನುತ್ತಾರೆ ಸಿಬ್ಬಂದಿ ಮುಖ್ಯಸ್ಥರಾದ ಶಾಲಿನಿ ಪಿಳ್ಳೇ.

ಮೈಕ್ರೋಸಾಫ್ಟ್‌ನಲ್ಲಿ ಬಸ್ಸು ಮತ್ತು ಕ್ಯಾಬ್

ಹೈದರಾಬಾದಿನಲ್ಲಿ ಮೈಕ್ರೋಸಾಫ್ಟ್ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಿಬ್ಬಂದಿಗಳನ್ನು ಕರೆದೊಯ್ಯಲು ಮತ್ತು ಬಿಡಲು ಬಸ್ಸುಗಳನ್ನು ಹೊಂದಿದೆ. ಕಚೇರಿ ಸಮಯದಲ್ಲಿ ಹೆಚ್ಚು ಮಂದಿಯನ್ನು ಕರೆತರಲು ಕ್ಯಾಬ್‌ಗಳೂ ಇವೆ.

ಇನ್ಫೋಸಿಸ್ ಬಸ್ಸು, ಕ್ಯಾಬ್

 ದೇಶದ ಉಳಿದೆಡೆ ಇನ್ಫೋಸಿಸ್ ಬಸ್ಸು, ಕ್ಯಾಬ್ ಮತ್ತು ಸೈಕಲ್‌ಗಳಲ್ಲಿ 1.79ಕ್ಕೂ ಅಧಿಕ ಉದ್ಯೋಗಿಗಳನ್ನು ಕರೆತರುತ್ತದೆ. ಪುಣೆಯಲ್ಲಿ 'ಅಬ್ ಬಸ್ ಕರೋ' ಎನ್ನುವ ಅಭಿಯಾನವನ್ನು ಸಿಬ್ಬಂದಿಗಳು ಕಂಪನಿ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಮಾಡಲು ನಡೆಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗಿಗಳು ಸೈಕಲ್‌ನಲ್ಲಿ ಕಚೇರಿಗೆ ಹೋಗುವುದನ್ನು ಪ್ರಾಯೋಜಿಸಲಾಗಿದೆ.

ಆಮ್‌ಎಕ್ಸ್ ದಕ್ಷಿಣ ಏಷ್ಯಾ: ಕಾರು ರಹಿತ ಮಂಗಳವಾರ

ಸಾರ್ವಜನಿಕ ಸಾರಿಗೆ ಬಳಸಿ ಕಾರು ರಹಿತವಾಗಿ ವಾರಕ್ಕೊಮ್ಮೆ ಬರಲು ಪ್ರೋತ್ಸಾಹಿಸುತ್ತಿದ್ದೇವೆ. ಕಾರುಗಳ ಸಂಖ್ಯೆ ಕಡಿಮೆಯಾದಷ್ಟೂ ಮಾಲಿನ್ಯ ಕಡಿಮೆಯಾಗಲಿದೆ ಎಂದು ಗಾಲ್ಫ್ ಕೋರ್ಸ್ ರೋಡ್ ಮತ್ತು ಸೈಬರ್‌ಸಿಟಿಯಲ್ಲಿ ಕಚೇರಿ ಇರುವ ಸಂಸ್ಥೆಯ ಅಧ್ಯಕ್ಷ ಸಂಜಯ್ ರಿಷಿ ಹೇಳಿದ್ದಾರೆ.

ಇತರ ಗುರುಗ್ರಾಮ ಕಂಪೆನಿಗಳು: ಫ್ಲೆಕ್ಸಿ ಅವಧಿ.

"ಗುರುಗ್ರಾಮದಲ್ಲಿ ಕೇಂದ್ರ ಕಚೇರಿ ಇರುವ ಬಕಾರ್ಡಿ, ಎರಿಕ್ಸನ್, ಸ್ಯಾಮ್‌ಸಂಗ್ ಮತ್ತು ಆಮ್ವೇಗಳು ಫ್ಲೆಕ್ಸಿ ಅವಧಿ ಹೊಂದಿವೆ. ಗುರುಗ್ರಾಮದಲ್ಲಿ ಸಾರಿಗೆ ದೊಡ್ಡ ಚಿಂತೆ. ಹೀಗಾಗಿ ನಾವು ಸಿಬ್ಬಂದಿಗಳಿಗೆ ಫ್ಲೆಕ್ಸಿ ಸಮಯ ಕೊಟ್ಟಿದ್ದೇವೆ. ಮನೆಯಿಂದಲೇ ಕೆಲಸ ಮಾಡಲು ಪ್ರೋತ್ಸಾಹಿಸುತ್ತೇವೆ. ಮೆಟ್ರೋ ಬಳಸುವಂತೆಯೂ ಸಲಹೆ ಕೊಡುತ್ತೇವೆ" ಎನ್ನುತ್ತಾರೆ ಬಕಾರ್ಡಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಸುಬ್ರಹ್ಮಣ್ಯಂ.

ಕೃಪೆ: indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News