ಟ್ರಂಪ್‌ಗಿಂತ ಹಿಲರಿ 6 ಶೇ. ಮತಗಳಿಂದ ಮುನ್ನಡೆ

Update: 2016-11-03 16:06 GMT

ನ್ಯೂಯಾರ್ಕ್, ನ. 3: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಸಂಭಾವ್ಯ ಮತದಾರರ ಪೈಕಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ತನ್ನ ಎದುರಾಳಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗಿಂತ 6 ಶೇಕಡ ಮತಗಳ ಅಂತರದಿಂದ ಮುಂದಿದ್ದಾರೆ ಎಂದು ಬುಧವಾರ ಬಿಡುಗಡೆಯಾದ ರಾಯ್ಟರ್ಸ್/ಇಪ್ಸಾಸ್ ದೈನಂದಿನ ಚುನಾವಣಾ ಸಮೀಕ್ಷೆ ಹೇಳಿದೆ.

 ಹಿಲರಿಯ ಖಾಸಗಿ ಇಮೇಲ್ ಸರ್ವರ್ ಬಳಕೆ ಬಗ್ಗೆ ನಡೆದ ತನಿಖೆಯ ವಿವರಗಳನ್ನು ಎಫ್‌ಬಿಐ ಮುಖ್ಯಸ್ಥರು ಕಳೆದ ವಾರ ಬಹಿರಂಗಪಡಿಸುವುದಕ್ಕೆ ಮುನ್ನ ಇದ್ದ ಮುನ್ನಡೆಯನ್ನೇ ಅವರು ಈ ಸಮೀಕ್ಷೆಯಲ್ಲೂ ಕಾದುಕೊಂಡಿದ್ದಾರೆ.

ನವೆಂಬರ್ 8ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News