×
Ad

ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ

Update: 2016-11-03 22:52 IST

ಹೊಸದಿಲ್ಲಿ,ನ.3: ‘ಸಮಾನ ಶ್ರೇಣಿ ಸಮಾನ ಪಿಂಚಣಿ(ಒಆರ್‌ಒಪಿ)’ ಯೋಜನೆಯ ಅನುಷ್ಠಾನದಲ್ಲಿ ಸರಕಾರದ ವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾಗಿರುವ ಮಾಜಿ ಯೋಧ ರಾಮಕಿಶನ್ ಗ್ರೆವಾಲ್ ಅವರ ‘ಮಾನಸಿಕ ಸ್ಥಿತಿ’ಯನ್ನು ನಿನ್ನೆ ಪ್ರಶ್ನಿಸಿದ್ದ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು, ವಾಸ್ತವದಲ್ಲಿ ಗ್ರೆವಾಲ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಸರಪಂಚ ಚುನಾವಣೆಗೂ ಸ್ಪರ್ಧಿಸಿದ್ದರು ಎಂದು ಇಂದಿಲ್ಲಿ ಹೇಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.

ಮಾಜಿಯೋಧನ ಆತ್ಮಹತ್ಯೆ ದುರದೃಷ್ಟಕರ ಎಂದು ಬಣ್ಣಿಸಿದ ಸಿಂಗ್, ಗ್ರೆವಾಲ್ ಅವರಿಗೆ ಬ್ಯಾಂಕಿನಲ್ಲಿ ಸಮಸ್ಯೆಯಿತ್ತೇ ವಿನಃ ಒಆರ್‌ಒಪಿಯೊಂದಿಗಲ್ಲ ಎಂದರು. ಅಲ್ಲದೆ,ಅವರಿಗೆ ಸಲ್ಫಾ ಮಾತ್ರೆಗಳು ಸಿಕ್ಕಿದ್ದು ಹೇಗೆ ಮತ್ತು ಅವುಗಳನ್ನು ಅವರಿಗೆ ನೀಡಿದ್ದವರು ಯಾರು ಎಂದು ಪ್ರಶ್ನಿಸುವ ಮೂಲಕ ಗ್ರೆವಾಲ್ ಅವರ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು ಎಂದು ಪರೋಕ್ಷವಾಗಿ ಸೂಚಿಸಿದರು.

ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಗ್ರೆವಾಲ್ ಅವರ ಮಾನಸಿಕ ಸ್ಥಿತಿ ಹೇಗಿತ್ತು ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ಸಿಂಗ್ ನಿನ್ನೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News