×
Ad

ಅಮೆರಿಕದ ರಾಜಕೀಯ ಸ್ಥಿತಿಗತಿಗೆ ‘ಅಸಹ್ಯ’ಪಟ್ಟುಕೊಂಡ ಮತದಾರರು!

Update: 2016-11-04 22:55 IST

ನ್ಯೂಯಾರ್ಕ್, ನ. 4: 2016ರ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಂತೆಯೇ, ಅಮೆರಿಕದ ರಾಜಕೀಯದ ಸ್ಥಿತಿಗತಿ ಬಗ್ಗೆ ಹೆಚ್ಚಿನ ಸಂಖ್ಯೆಯ ಮತದಾರರು ‘ಅಸಹ್ಯ’ಪಟ್ಟುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಆಗಲಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಗಲಿ ಸಾಚಾ ಅಲ್ಲ ಹಾಗೂ ಚುನಾವಣೆಯ ಬಳಿಕ ದೇಶವನ್ನು ಒಗ್ಗೂಡಿಸುವ ಸಾಮರ್ಥ್ಯವನ್ನು ಅವರು ಹೊಂದಿಲ್ಲ ಎಂಬ ಅಭಿಪ್ರಾಯವನ್ನು ಮತದಾರರು ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪ್ರಚಾರವು ತಮ್ಮಲ್ಲಿ ಆಸಕ್ತಿ ಹುಟ್ಟಿಸುವ ಬದಲು ಅಸಹ್ಯ ಹುಟ್ಟಿಸಿದೆ ಎಂಬುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದದ ಪ್ರತಿ 10 ಮಂದಿಯ ಪೈಕಿ ಎಂಟು ಮಂದಿ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್/ಸಿಬಿಎಸ್ ನ್ಯೂಸ್ ನಡೆಸಿರುವ ಸಮೀಕ್ಷೆ ಹೇಳೀದೆ.

ವಾರಗಳ ಮುಂಚೆ ತನ್ನ ಎದುರಾಳಿ ಟ್ರಂಪ್‌ಗಿಂತ ಭಾರೀ ಮುನ್ನಡೆಯಲ್ಲಿದ್ದ ಹಿಲರಿ ಕ್ಲಿಂಟನ್‌ರ ಮುನ್ನಡೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಆದಾಗ್ಯೂ, ಅವರು ಟ್ರಂಪ್‌ಗಿಂತ ಕಡಿಮೆ ಅಂತರದ ಮುನ್ನಡೆಯನ್ನು ಕಾದುಕೊಂಡಿದ್ದಾರೆ.

ಸಮೀಕ್ಷೆಯ ಪ್ರಕಾರ, ಹಿಲರಿ 45 ಶೇಕಡ ಸಂಭಾವ್ಯ ಮತದಾರರ ಬೆಂಬಲ ಹೊಂದಿದ್ದರೆ, ಟ್ರಂಪ್ 42 ಶೇಕಡ ಬೆಂಬಲ ಹೊಂದಿದ್ದಾರೆ.
ಹಿಲರಿಯ ಇಮೇಲ್ ಹಗರಣದ ಬಗ್ಗೆ ಎಫ್‌ಬಿಐ ಹೊರಗೆಡವಿದ ಮಾಹಿತಿಯ ಬಳಿಕ ಈ ಸಮೀಕ್ಷೆ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News