ಇಂಡೋನೇಶ್ಯ ದೋಣಿ ದುರಂತ: ಮೃತರ ಸಂಖ್ಯೆ 54ಕ್ಕೆ

Update: 2016-11-04 17:37 GMT

ಬಟಮ್ (ಇಂಡೋನೇಶ್ಯ), ನ. 4: ಇಂಡೋನೇಶ್ಯದ ಬಟಮ್ ದ್ವೀಪದಲ್ಲಿ ಸ್ಪೀಡ್ ಬೋಟೊಂದು ಮುಳುಗಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು.

ಬಟಮ್ ದ್ವೀಪದ ಸಮುದ್ರದಲ್ಲಿ ಎರಡು ದಿನಗಳ ಹಿಂದೆ ದೋಣಿಯೊಂದು ಹವಳ ದಿಬ್ಬಕ್ಕೆ ಢಿಕ್ಕಿ ಹೊಡೆದು ಮುಳುಗಿತ್ತು.

ದೋಣಿಯಲ್ಲಿ ಅದರ ಸಾಮರ್ಥ್ಯವನ್ನು ಮೀರಿ 98 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಹೆಚ್ಚಿನವರು ಇಂಡೋನೇಶ್ಯದ ವಲಸೆ ಕಾರ್ಮಿಕರು. ಅವರು ಮಲೇಶ್ಯದಿಂದ ಬಟಮ್‌ಗೆ ಪ್ರಯಾಣಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News