ದೇವಸ್ಥಾನಕ್ಕೆ ಭೇಟಿ ನೀಡಿದ ಟ್ರಂಪ್ ಪುತ್ರ
Update: 2016-11-06 22:31 IST
ಒರ್ಲಾಂಡೊ, ನ. 6: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರನ್ನು ಓಲೈಸುವುದಕ್ಕಾಗಿ ರಿಪಬ್ಲಿಕನ್‌ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಮಗ ಎರಿಕ್ ಫ್ಲೋರಿಡದ ಹಿಂದೂ ದೇವಾಲಯವೊಂದರಲ್ಲಿ ಸಾಂಪ್ರದಾಯಿಕ ‘ಆರತಿ’ ಕಾರ್ಯಕ್ರಮವೊಂದರಲ್ಲಿ ಶನಿವಾರ ಭಾಗವಹಿಸಿದರು.
ಚುನಾವಣೆಯಲ್ಲಿ ಮಹತ್ವದ ಪರಿಣಾಮ ಬೀರುವ ಫ್ಲೋರಿಡ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಶ್ರೀಮಂತ ಹಿಂದೂಗಳಿದ್ದಾರೆ. ಅವರು ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಬಲ್ಲವರಾಗಿದ್ದಾರೆ.