×
Ad

ಡೊನಾಲ್ಡ್ ಆಯ್ಕೆ ವಿರುದ್ಧ ಪ್ರತಿಭಟನೆ

Update: 2016-11-09 22:24 IST

ಸ್ಯಾನ್‌ಫ್ರಾನ್ಸಿಸ್ಕೊ, ನ. 9: ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿಜಯಿಯಾಗಿದ್ದಾರೆ ಎಂಬುದಾಗಿ ಘೋಷಿಸಿದ ಬಳಿಕ, ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದವು.

‘ಅವರು ನನ್ನ ಅಧ್ಯಕ್ಷರಲ್ಲ’ ಎಂಬುದಾಗಿ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.

ಓಕ್‌ಲ್ಯಾಂಡ್‌ನಲ್ಲಿ ಸೇರಿದ ಪ್ರತಿಭಟನಕಾರರು ರಸ್ತೆಗಳನ್ನು ಬಂದ್ ಮಾಡಲು ಪ್ರಯತ್ನಿಸಿದರು.

ಸುಮಾರು 200ರಷ್ಟಿದ್ದ ಪ್ರತಿಭಟನಕಾರರು ಓಕ್‌ಲ್ಯಾಂಡ್ ಮತ್ತು ಬರ್ಕ್‌ಲೇ ರಾಜ್ಯಗಳ ಗಡಿಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಿರ್ಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News