ಮೋಹಿತ್ ಶರ್ಮ ಫಾರ್ಮ್ ಕಳೆದುಕೊಳ್ಳಲು ನೀಡಿದ ಕಾರಣ ಕೇಳಿದರೆ ನೀವು ತಲೆ ಚಚ್ಚಿಕೊಳ್ಳುವ ಸಾಧ್ಯತೆ ಇದೆ!

Update: 2016-11-11 11:54 GMT

ಹೊಸದಿಲ್ಲಿ, ನ.11: ಭಾರತದ ವೇಗದ ಬೌಲರ್ ಮೋಹಿತ್ ಶರ್ಮ ಕಳೆದ ವರ್ಷದ ಅಕ್ಟೋಬರ್‌ನಿಂದ ಸೀಮಿತ ಓವರ್ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ. ಟ್ವೆಂಟಿ-20 ವಿಶ್ವಕಪ್‌ನ ತಂಡದಲ್ಲಿದ್ದರೂ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ತನ್ನ ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 7 ಓವರ್‌ಗಳಲ್ಲಿ 84 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ 50 ಓವರ್‌ಗಳಲ್ಲಿ 438 ರನ್ ಗಳಿಸಿತ್ತು. ಮೋಹಿತ್ ಆತ್ಮವಿಶ್ವಾಸ ಕುಗ್ಗಲು ಈ ಕಳಪೆ ಬೌಲಿಂಗ್ ಕೂಡ ಕಾರಣವಾಗಿರಬಹುದು.

ಆದರೆ, ಮೋಹಿತ್ ಶರ್ಮ ತಾನು ಫಾರ್ಮ್ ಕಳೆದುಕೊಳ್ಳಲು ನೀಡುತ್ತಿರುವ ಕಾರಣ ಕೇಳಿದರೆ ಅಚ್ಚರಿಯಾಗದು. ಕೂದಲು ಉದುರುತ್ತಿರುವ ಕಾರಣ ತನ್ನ ಬೌಲಿಂಗ್‌ನ ಲಯವೂ ತಪ್ಪಿ ಹೋಗಿದೆ ಎಂದು ಅವರು ಹೇಳುತ್ತಿದ್ದಾರೆ.

 ‘‘ನನ್ನ ತಲೆಗೂದಲು ಉದುರಲಾರಂಭಿಸಿದೆ. ಇದು ನನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದೆ. ಮಾತ್ರವಲ್ಲ ನನ್ನ ಬೌಲಿಂಗ್‌ನ ಮೇಲೂ ಕೆಟ್ಟ ಪರಿಣಾಮ ಬೀರಿದೆ’’ಎಂದು ಹರ್ಯಾಣದ ವೇಗದ ಬೌಲರ್ ಹೇರ್ ಸ್ಟುಡಿಯೋದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೇಳಿದ್ದಾರೆ.

28ರ ಹರೆಯದ ಮೋಹಿತ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ. ಅವರು ಆಡಿರುವ 5 ರಣಜಿ ಟ್ರೋಫಿ ಪಂದ್ಯಗಳಲ್ಲಿ ಕೇವಲ 16 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News