×
Ad

ಮೋದಿ ವಿರುದ್ಧ ಬಿಜೆಪಿ ನಾಯಕಿಯ ವಾಗ್ದಾಳಿ

Update: 2016-11-13 21:52 IST

ಹೊಸದಿಲ್ಲಿ, ನ. 13 : 500, 1000 ರೂ.  ನೋಟುಗಳ ಹಠಾತ್ ರದ್ದತಿ ಹಾಗು ಆ ಬಳಿಕ ಹೊಸ ನೋಟುಗಳನ್ನು ಪಡೆಯಲು ಜನತೆ ಪಡಿಪಾಟಲು ಪಡೆಯುತ್ತಿರುವುದು ಆಕ್ರೋಶಕ್ಕೆ ಗುರಿಯಾಗಿರುವಾಗ ಈಗ ಬಿಜೆಪಿ ಮುಖಂಡರೇ ಕೇಂದ್ರದ ವಿರುದ್ಧ ಮಾತನಾಡಲು ಪ್ರಾರಂಭಿಸಿದ್ದಾರೆ. 
ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ ಪ್ರೊ. ಲಕ್ಷ್ಮೀಕಾಂತ ಚಾವ್ಲಾ ಅವರು ಕೇಂದ್ರದ ಹಠಾತ್ ನಿರ್ಧಾರವನ್ನು ಖಂಡಿಸಿದ್ದಾರೆ. ಕಪ್ಪು ಹಣದ ಪ್ರವಾಹ ತಡೆಯಲು ಕೇಂದ್ರ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಆದರೆ ಈ ನಿರ್ಧಾರ್ ತೆಗೆದುಕೊಳ್ಳುವ ಮೊದಲು ಅದಕ್ಕೆ ಬೇಕಾದ ಸೂಕ್ತ ತಯಾರಿ ಮಾಡಿಕೊಳ್ಳದೆ ಜನರನ್ನು ಬಿಕಾರಿಗಳಂತೆ ಮಾಡಿಬಿಟ್ಟಿದೆ ಎಂದು ಚಾವ್ಲಾ ಅವರು ಹೇಳಿದ್ದಾರೆ. 
" ಬ್ಯಾಂಕಿನಲ್ಲಿ ತಮ್ಮ ಹಣ ಇರುವವರು ಅವರಿಗೆ ಬೇಕಾದಷ್ಟು ಹಣ ತೆಗೆದುಕೊಳ್ಳಲು ಅವಕಾಶ ನೀಡಬೇಕಿತ್ತು. ಆದರೆ ದಿನಕ್ಕೆ 4000 ರೂ. ಮಿತಿ ನಿಗದಿ ಮಾಡುವ ಮೂಲಕ ಸರಕಾರ ಜನರನ್ನು ಭಿಕಾರಿ ಮಾಡಿಬಿಟ್ಟಿದೆ. ಅವರು ಪ್ರತಿದಿನ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಬ್ಯಾಂಕುಗಳಲ್ಲಿ ಹೆಚ್ಚು ಕಾಉಣ್ತಾರ ಗಳಲ್ಲಿ ಹಣ ನೀಡುವ ವ್ಯವಸ್ಥೆ ಆಗಬೇಕಿತ್ತು. ಇದರಿಂದ ಪ್ರತಿದಿನ ಜನರು ಸಮಸ್ಯೆ ಎದುರಿಸುವುದು ತಪ್ಪುತ್ತಿತ್ತು. ದಿನಕ್ಕೆ ಕನಿಷ್ಠ 10,000 ರೂ ತೆಗೆದುಕೊಳ್ಳಲು ಅವಕಾಶ ನೀಡಬೇಕಿತ್ತು " ಎಂದು ಅವರು ಹೇಳಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News