×
Ad

4.3 ಕೋಟಿಗೆ ಮೋದಿ ಸೂಟು ಖರೀದಿಸಿದ್ದ ಉದ್ಯಮಿ

Update: 2016-11-14 20:25 IST

ಹೊಸದಿಲ್ಲಿ, ನ. 14 :  ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿ ಬಳಿಕ  ಭಾರೀ ಚರ್ಚೆಗೊಳಗಾಗಿದ್ದ ಅವರ ಹೆಸರು ಬರೆದಿದ್ದ ದುಬಾರಿ ಸೂಟು ನೆನಪಿದೆಯೇ ? ಹಾಗಿದ್ದರೆ ದುಬಾರಿ ಸೂಟು ವಿವಾದಕ್ಕೆ ಒಳಗಾದ ಕೂಡಲೇ ಅದನ್ನು ಪ್ರಧಾನಿ ಹರಾಜು ಹಾಕಿದಾಗ 4.3 ಕೋಟಿ ರೂಪಾಯಿಗಳಿಗೆ ಅದನ್ನು ಖರೀದಿಸಿ ಗಿನ್ನೆಸ್ ರೆಕಾರ್ಡ್ ಗೆ ಸೇರಿದ್ದ ಆಭರಣ ಉದ್ಯಮಿ ಲಾಲ್ಜಿ ಭಾಯ್ ಪಟೇಲ್ ನಿಮಗೆ ನೆನಪಿರಲೇಬೇಕು. 

ಈಗ ಅವರು ಇನ್ನೊಂದು ' ಭಾರೀ ಸಾಧನೆಯನ್ನೇ' ಮಾಡಿ ಇನ್ನೊಂದು ಸಾಧನೆ ಮಾಡಿದ್ದಾರೆ. ಆದರೆ ಇದು ಅವರಿಗೆ ಖ್ಯಾತಿ ತರುವ ಬದಲು ಕುಖ್ಯಾತಿ ತರುವ ದಾಖಲೆ ! ಏಕೆಂದರೆ, 500, 1000 ರೂ. ನೋಟುಗಳ ರದ್ದತಿ ಬಳಿಕ  ಅನಧಿಕೃತ ಮೂಲಗಳ ಪ್ರಕಾರ ರದ್ದುಗೊಂಡ 500, 1000 ರೂ. ನೋಟುಗಳಲ್ಲಿ  6,000 ಕೋಟಿ ರೂಪಾಯಿ ಕಪ್ಪು ಹಣವನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ (ಆದರೆ ಇದು ಅಧಿಕೃತವಾಗಿ ದೃಢಪಟ್ಟಿಲ್ಲ. ). ಇದಕ್ಕಾಗಿ ಅವರು ಎಲ್ಲಿಯೂ ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತದ್ದನ್ನು ಯಾರೂ ನೋಡಿದವರಿಲ್ಲ. 
ಲಾಲ್ಜಿ ಭಾಯ್ ಅವರು ದೇಶದ ಅತ್ಯಂತ ಸಿರಿವಂತ ಆಭರಣ ಉದ್ಯಮಿಗಳಲ್ಲಿ ಒಬ್ಬರು. ಹಲವು ದೇಣಿಗೆ, ದಾನದ ಕೆಲಸಗಳ ಮೂಲಕವೂ ಅವರು ಗಮನ ಸೆಳೆದಿದ್ದಾರೆ. ಪ್ರಧಾನಿ ಆಶಯದಂತೆ  ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ 200 ಕೋಟಿ ರೂ. ತೆಗೆದಿಟ್ಟು ಅವರು ಸುದ್ದಿಯಾಗಿದ್ದರು. 
ಅವರ ಉದ್ಯಮಿ ಸಂಸ್ಥೆ ಧರ್ಮಾನಂದನ್ ಡೈಮಂಡ್ಸ್ ಪ್ರೈ.ಲಿ. ಅನ್ನು ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News