×
Ad

ಪ್ರಧಾನಿ ಮೋದಿ ಎದುರು ಗೋವಾ ಸಿಎಂ ಅತಿವಿನಯ

Update: 2016-11-14 21:30 IST

ಹೊಸದಿಲ್ಲಿ , ನ. 14 : ರವಿವಾರ ಗೋವಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವುಕ ಭಾಷಣ ಎಲ್ಲೆಡೆ ಚರ್ಚೆಯಲ್ಲಿತ್ತು. ಆದರೆ ಅದೇ ಕಾರ್ಯಕ್ರಮದ ಇನ್ನೊಂದು ವೀಡಿಯೊ ಈಗ ವೈರಲ್ ಆಗಿದೆ. 

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೆಕರ್ ಅವರ ವರ್ತನೆ ಈಗ ಎಲ್ಲೆಡೆ ಭಾರೀ ಚರ್ಚೆಗೆ, ಅಸಮಾಧಾನಕ್ಕೆ, ಅಪಹಾಸ್ಯಕ್ಕೆ ಕಾರಣವಾಗಿದೆ. ಕಾರ್ಯಕ್ರಮಕ್ಕೆ ಮೋದಿ ಅವರು ವೇದಿಕೆ ಏರಿದ ಕೂಡಲೇ ಅವರನ್ನು ಕೈ ಮುಗಿದು ಸ್ವಾಗತಿಸಿದ ಮುಖ್ಯಮಂತ್ರಿ ಪರ್ಸೆಕರ್ ಅವರು ಬಳಿಕ ಅತೀ ವಿನಯ ಪ್ರದರ್ಶಿಸಿ, ತಮ್ಮ ಸ್ಥಾನದ ಘನತೆ ಮರೆತು ಕೈ ಮುಗಿದೇ ಪ್ರಧಾನಿ ಎದುರು ಕುಳಿತ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೋದಿ ಅವರು ನೀರು ಕೇಳಿದಾಗ ಅದನ್ನು ನೀಡಲು ತಾವೇ ಕೈಮುಂದೆ ಮಾಡಿದರು ಪರ್ಸೆಕರ್.  ಪರ್ಸೆಕರ್ ಇಷ್ಟು ವಿನಯ ಪ್ರದರ್ಶಿಸಿದರೂ ಮೋದಿ ಮಾತ್ರ ಅದನ್ನು ಗಣನೆಗೇ ತೆಗೆದುಕೊಳ್ಳದೆ ಇದ್ದದ್ದು ಕೂಡ ಕೆಲವರ ಚರ್ಚೆಗೆ ಆಹಾರವಾಗಿದೆ. 

ಇಡೀ ರಾಜ್ಯದ ಪ್ರತಿನಿಧಿ ಆಗಿ ಪರ್ಸೆಕರ್ ಅಷ್ಟೊಂದು ದೈನೇಸಿ ಸ್ಥಿತಿ ಯಾಕೆ ಪ್ರದರ್ಶಿಸಿದರು ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಜಯಲಲಿತಾ ಹಾಗು ಅವರ ಹಿಂಬಾಲಕರು ತೋರಿಸುವ ' ಗುಲಾಮಗಿರಿ' ಯನ್ನು ಟೀಕಿಸುವವರು ಇದನ್ನೊಮ್ಮೆ ನೋಡಬೇಕು ಎಂದೂ ಹಲವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News