ತಾನು ಸ್ಟಾರ್ ಆಗಲು ಅರ್ಮಾನ್ ಕೊಹ್ಲಿ ಕಾರಣ ಎಂದ ಶಾರುಖ್ !: ಅದು ಹೇಗೆ ಗೊತ್ತೇ ?
ಹೊಸದಿಲ್ಲಿ, ನ. 14 : ತಾನು ತನ್ನ ಕಠಿಣ ಪರಿಶ್ರಮದಿಂದಲೇ ಸೂಪರ್ ಸ್ಟಾರ್ ಆಗಿದ್ದೇನೆ ಎಂದು ಇತ್ತೀಚಿಗೆ ಹೇಳಿದ್ದ ಶಾರುಖ್ ಖಾನ್ ಇದೀಗ ತಾನು ಸ್ಟಾರ್ ಆಗಲು ಅರ್ಮಾನ್ ಕೊಹ್ಲಿ ಕಾರಣ ಎಂದು ಹೇಳಿದ್ದಾರೆ. ರಿತೇಶ್ ದೇಶಮುಖ್ ಹಾಗು ಸಾಜಿದ್ ಖಾನ್ ನಡೆಸಿ ಕೊಡುವ ಸೆಲೆಬ್ರಿಟಿ ಚಾಟ್ ಷೋ ' ಯಾರೋಂಕಿ ಬಾರಾತ್ ' ನಲ್ಲಿ ಅನುಷ್ಕಾ ಶರ್ಮ ಜೊತೆ ಭಾಗವಹಿಸಿ ಮಾತನಾಡಿದ ಅವರು ತನಗೆ ಪ್ರಪ್ರಥಮ ಬ್ರೇಕ್ ಸಿಕ್ಕಿದ್ದು ಅರ್ಮಾನ್ ನಿಂದ ಎಂದು ಬಹಿರಂಗಪಡಿಸಿದ್ದಾರೆ.
1992 ರಲ್ಲಿ ಶಾರುಖ್ ನಟಿಸಿದ ಪ್ರಪ್ರಥಮ ಚಿತ್ರ ದಿವಾನಕ್ಕೆ ಮೊದಲು ದಿವ್ಯ ಭಾರತಿ ಹಾಗು ಅರ್ಮಾನ್ ಕೊಹ್ಲಿ ನಾಯಕ, ನಾಯಕಿ ಆಗಿದ್ದರು. ಅವರಿಬ್ಬರ ಪೋಸ್ಟರ್ ಕೂಡ ಮುದ್ರಣಗೊಂಡಿತ್ತು. ಒಂದು ಶೆಡ್ಯೂಲ್ ಶೂಟಿಂಗ್ ಕೂಡ ಆಗಿತ್ತು. ಆದರೆ ಅಷ್ಟರಲ್ಲಿ ಅರ್ಮಾನ್ ಚಿತ್ರದಿಂದ ಹೊರ ನಡೆದು ಬಿಟ್ಟರು. ಇದರಿಂದ ನಿರ್ಮಾಪಕರು ಶಾರುಖ್ ರನ್ನು ಸಂಪರ್ಕಿಸಿ ನಟಿಸುವ ಅಹ್ವಾನ ನೀಡಿದರು . ಶಾರುಖ್ ಒಪ್ಪಿದರು.
ಅದರ ನಂತರ ನಡೆದಿದ್ದು ಈಗ ಇತಿಹಾಸ !