ವಿಶ್ವಕಪ್ ಅರ್ಹತಾ ಪಂದ್ಯ: ಪೋರ್ಚುಗಲ್ ಜಯಭೇರಿ

Update: 2016-11-14 18:15 GMT

ಫಾರೊ(ಫೋರ್ಚುಗಲ್), ನ.14: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ವಿಶ್ವಕಪ್‌ನ ಅರ್ಹತಾ ಪಂದ್ಯದಲ್ಲಿ ಪೋರ್ಚುಗಲ್ ತಂಡ ಲಾಟ್ವಿಯಾ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿದೆ.

ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್‌ಗೆ ನಾಯಕ ರೊನಾಲ್ಡೊ ಮೊದಲಾರ್ಧದ 28ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ, 68ನೆ ನಿಮಿಷದಲ್ಲಿ ಗೋಲು ಬಾರಿಸಿದ ಲಾಟ್ವಿಯಾ ತಂಡದ ಜುಜಿನ್ಸ್ ಗೋಲನ್ನು 1-1 ರಿಂದ ಸಮಬಲಗೊಳಿಸಿತು.

ಎರಡು ನಿಮಿಷಗಳ ಬಳಿಕ ಕಾರ್ವಲ್ಹೊ(70ನೆ ನಿಮಿಷ) ಮತ್ತೊಂದು ಗೋಲು ಬಾರಿಸಿ ತಂಡಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. 90ನೆ ನಿಮಿಷದಲ್ಲಿ ಗೋಲು ಬಾರಿಸಿದ ಬ್ರುನೊ ಅಲ್ವೆಸ್ ಪೋರ್ಚುಗಲ್ 4-1 ಅಂತರದ ಗೆಲುವು ಸಾಧಿಸಲು ನೆರವಾದರು.

ನಾಲ್ಕು ಪಂದ್ಯಗಳಲ್ಲಿ 9 ಅಂಕ ಗಳಿಸಿರುವ ಪೋರ್ಚುಗಲ್ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್‌ಗಿಂತ ಮೂರು ಅಂಕ ಹಿಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News