ಶ್ರೀಮಂತರ ತಪ್ಪಿಗೆ ಕಷ್ಟಪಡುವುದು ಜನಸಾಮಾನ್ಯರು: ತಮಿಳ್ ಸೂಪರ್‌ಸ್ಟಾರ್ ವಿಜಯ್
ಚೆನ್ನೈ, ನ. 16: ಕಪ್ಪುಹಣ ತಡೆಯುವುದಕ್ಕಾಗಿ ಸರಕಾರ 500,1000ರೂಪಾಯಿ ನೋಟುಗಳನ್ನು ಹಿಂಪಡೆದ ಕ್ರಮದಿಂದಾಗಿ ದೇಶದ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆಂದು ತಮಿಳ್ ಸೂಪರ್ ಸ್ಟಾರ್ ವಿಜಯ್ ವಿಷಾದ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ. ದೇಶದ ಶೇ.20 ರಷ್ಟು ಶ್ರೀಮಂತರ ತಪ್ಪಿಗೆ ಶೇ. 80ರಷ್ಟಿರುವ ಸಾಮಾನ್ಯ ಜನರು ಕಷ್ಟಕಪಡುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಕಪ್ಪುಹಣದ ವಿರುದ್ಧ ಪ್ರಧಾನಿ ಕೈಗೊಂಡಿರುವುದು ಉತ್ತಮ ಕ್ರಮವಾಗಿದೆ. ಇದು ದೇಶಕ್ಕೆ ಅಗತ್ಯವಿದೆ. ಧೈರ್ಯದಿಂದ ತೆಗೆದುಕೊಂಡ ಕ್ರಮವನ್ನು ನಾನು ಸ್ವಾಗತಿಸುವೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಖಂಡಿತ. ಆದರೆ ಈ ಕ್ರಮದಲ್ಲಿಯೂ ಲೋಪವಾಗಿದೆ. ಕೆಲವು ವ್ಯವಸ್ಥೆಯನ್ನು ಸರಿಪಡಿಸಿರುತ್ತಿದ್ದರೆ. ಕೆಲವು ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿತ್ತು ಎಂದು ನನಗನಿಸುತ್ತಿದೆ.
ಹಸಿವನ್ನು ದೂರವಿಡಲು, ಔಷಧ ಖರೀದಿಸಲು ಹೊರಬರುವ ಜನರು ಏನೂ ಸಿಗದ ಸ್ಥಿತಿಯಲ್ಲಿ ಮರಳಿ ಹೋಗುತ್ತಿದ್ದಾರೆ. ದಿನಕೂಲಿಗೆ. ಸಣ್ಣ ಸಂಸ್ಥೆಗಳಲ್ಲಿಕೆಲಸಮಾಡುವ ಹಲವು ಮಂದಿ ಇದ್ದಾರೆ. ಇವರನ್ನು ಹಳೆ ನೋಟು ರದ್ದುಪಡಿಸಿದ ಕ್ರಮ ತೀರಾ ಗಂಭೀರವಾಗಿ ಬಾಧಿಸಿದೆ. ನೋಟು ಸಮಸ್ಯೆಯಿಂದಾಗಿ ಸಣ್ಣ ಶಿಶು ಸತ್ತದ್ದು. ಹಣಕ್ಕಾಗಿ ಕ್ಯೂ ನಿಂತು ವಯೋವೃದ್ಧ ಕುಸಿದು ಬಿದ್ದು ಮೃತನಾದದ್ದೆಲ್ಲ ಹೃದಯ ಹಿಂಡುವ ಘಟನೆಯಾಗಿದೆ ಎಂದು ವಿಜಯ್ ನೋವು ತೋಡಿಕೊಂಡಿದ್ದಾರೆಂದು ವರದಿ ತಿಳಿಸಿದೆ.