×
Ad

ನೋಟು ರದ್ದತಿಯ ಬಳಿಕದ ಪರಿಸ್ಥಿತಿ ಕುರಿತು ಬ್ಯಾಂಕ್ ಉದ್ಯೋಗಿಗಳು ಏನು ಹೇಳುತ್ತಾರೆ

Update: 2016-11-17 11:56 IST

ಬಾಲಿವುಡ್ ತಾರೆಯರು ಮತ್ತು ವಿರಾಟ್ ಕೊಹ್ಲಿ ಹೊರತಾಗಿ ಇನ್ನೆಲ್ಲರಿಗೂ ತೊಂದರೆಯಾಗಿದೆ. ಸರತಿ ಸಾಲುಗಳು ಮುಗಿಯುತ್ತಲೇ ಇಲ್ಲ. ಪರಿಹಾರ ಬಹಳ ದೂರವಿದೆ. ನರೇಂದ್ರ ಮೋದಿ ಅವರು ಕಪ್ಪು ಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವುದು ನೋಟು ಅಮಾನ್ಯ ಪ್ರಕರಣವನ್ನು ಹಲವು ಚಾಯ್ ಪೆ ಚರ್ಚಾಗಳ ವಸ್ತುವನ್ನಾಗಿಸಿದೆ.

ಆದರೆ ಒಮ್ಮೆ ನೀವು ಬರೆಯುವುದನ್ನು ನಿಲ್ಲಿಸಿ ಮೋದಿಯ ಈ ನಡೆಯನ್ನು ತಿಳಿಯದೇ ಇದ್ದು ಈ ಕ್ರಾಂತಿಯ ಭಾಗವಾಗಿರುವವರ ಬಗ್ಗೆ ಒಮ್ಮೆ ಯೋಚಿಸಿ. ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ ಎನ್ನುವ ಫೇಸ್‌ಬುಕ್ ಪುಟದಲ್ಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ತಮ್ಮ ನಗದು ವ್ಯವಹಾರ ನಡೆಸುವಾಗ ಎದುರಿಸುತ್ತಿರುವ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ.

"ನವೆಂಬರ್ 8ರಂದು ನಾನು ಸ್ವಲ್ಪ ತಡವಾಗಿ ಕೆಲಸ ಮುಗಿಸಿಹೋಗುವವಳಿದ್ದೆ. ಆಗಲೇ ಪತಿಯ ಕರೆ ಬಂತು. ರೂ. 500 ಮತ್ತು ರೂ. 1000 ನೋಟುಗಳು ರದ್ದಾಗಲಿವೆ ಎಂದು ನನಗೆ ಏಕೆ ಹೇಳಿಲ್ಲ" ಎಂದು ಅವರು ಕೇಳಿದಾಗ ಅಚ್ಚರಿಯಾಯಿತು ಎಂದು ಅವರು ಹೇಳಿದ್ದಾರೆ. "ಮರುದಿನ ನಾನು ಮುಂದಿನ ದಿನಗಳಿಗೆ ಸಿದ್ಧವಾಗುತ್ತಾ ಕಚೇರಿಗೆ ಹೋದೆ. ಆದರೆ ಯಾವುದೇ ಸಿದ್ಧತೆಯೂ ಮುಂದೆ ಬರುವ ಸನ್ನಿವೇಶವನ್ನು ಎದುರಿಸಲು ಸಾಕಷ್ಟಾಗಿರಲಿಲ್ಲ" ಎನ್ನುತ್ತಾರೆ. ಗೊಂದಲದಿಂದ ಕೊನೆಯೇ ಇಲ್ಲದ ಸರತಿಗಳು ಮತ್ತು ಮುಗಿಯದೇ ಇರುವ ಕೆಲಸದ ವೇಳೆಗಳು ಎನ್ನುವ ಈ ಮಹಿಳಾ ಮ್ಯಾನೇಜರ್ ಬರಹ ಆಕಸ್ಮಿಕ ನೋಟು ಅಮಾನ್ಯದಿಂದ ದೇಶದಲ್ಲಿ ಸೃಷ್ಟಿಯಾಗಿರುವ ಗೊಂದಲವನ್ನು ವಿವರಿಸಿರು.

"ಜನರು ಬ್ಯಾಂಕಿನ ಮುಂದೆ ಇರುವ ಸರತಿ ಸಾಲುಗಳನ್ನು ಮಾತ್ರ ನೋಡುತ್ತಿದ್ದಾರೆ. ಅದನ್ನು ಮೀರಿದ ಸನ್ನಿವೇಶಗಳು ಇರುವುದು ಅವರಿಗೆ ತಿಳಿಯುತ್ತಿಲ್ಲ. ದೇಶದಲ್ಲಿ ಹರಿದಾಡುತ್ತಿರುವ ವಿಷವರ್ತುಲದ ಭಾಗವಾಗಿ ಬಿಟ್ಟಿದ್ದೇವೆ ನಾವು" ಎಂದು ಆಕೆ ಹೇಳಿದ್ದಾರೆ.

"ಒಂದು ಕಡೆಯಲ್ಲಿ ಚಾಯ್‌ವಾಲಗಳು, ಇಸ್ತ್ರಿವಾಲಗಳು ತಮ್ಮ ಅತೀ ಕಷ್ಟಪಟ್ಟು ದುಡಿದ ಹಣವನ್ನು ಠೇವಣಿ ಇಡಲು ತಮ್ಮ ಸರದಿಗೆ ಕಾಯುತ್ತಿದ್ದರು. ಮತ್ತೊಂದು ಕಡೆ ಕಪ್ಪು ಹಣ ಹೊಂದಿದವರು ವರ್ಷಗಳ ಕಾಲ ತಪ್ಪಿಸಿಕೊಂಡು ಜೀವನ ನಡೆಸುತ್ತಿದ್ದವರು. ಇವರ ನಗದಿನ ಕೊಳೆತ ವಾಸನೆಯನ್ನು ತಡೆದುಕೊಳ್ಳಲು ನಮ್ಮ ಕಚೇರಿಯಲ್ಲಿ ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ತೊಟ್ಟರೂ ಸಾಧ್ಯವಾಗದು. ಅಷ್ಟೊಂದು ಸಹಿಸಲಾಗದ ಕೊಳೆತ ವಾಸನೆ!"

ಇನ್ನೂ ಕೆಲವು ವ್ಯಕ್ತಿಗಳು ತಮ್ಮ ಮಿತಿ ಮೀರಿದ ನಡತೆಯನ್ನು ಪ್ರದರ್ಶಿಸಿರುವುದನ್ನೂ ಅವರು ವಿವರಿಸುತ್ತಾರೆ. "ಜನರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದೇ ಅತೀ ದೊಡ್ಡ ಅಣಕ. ಅವರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ" ಎಂದು ಅವರು ಬ್ಯಾಂಕ್‌ಗಳು ಮತ್ತು ಅದರ ಸಿಬ್ಬಂದಿಗಳು ನೋಟು ಅಮಾನ್ಯದಿಂದಾಗಿ ಎದುರಿಸುತ್ತಿದ್ದ ಸಮಸ್ಯೆಯನ್ನು ಉಲ್ಲೇಖಿಸಿದರು. "ಹಿಂದಿನ ದಿನವಷ್ಟೇ ಬಿಲ್ಡರ್ ಒಬ್ಬರು ಹಲವು ವರ್ಷಗಳಿಂದ ನಾವು ಪದೇ ಪದೇ ಕೇಳಿಕೊಂಡರು ತಮ್ಮ ಸಾಲವನ್ನು ತೀರಿಸದೆ ಬಾಕಿ ಉಳಿಸಿದವರು ಆಕಸ್ಮಿಕವಾಗಿ ಸ್ವತಃ ಕರೆ ಮಾಡಿ ಸಾಲ ತುಂಬುವುದಾಗಿ ಮುಂದೆ ಬಂದಿದ್ದಾರೆ! ಅವರ ಬಳಿ 300 ಕೋಟಿಗಳಷ್ಟು ಕಪ್ಪು ಹಣವಿತ್ತು. ಹಿಂದೆ ನಾವು ಸಾಲ ತೀರಿಸಲು ಕೇಳಿದಾಗ ಅವರ ಬಳಿ ಹಣವೇ ಇರಲಿಲ್ಲ. ಇಷ್ಟೊಂದು ಕೊಳಕು ಉದ್ಯಮವಾಗಿದೆ ಇದು" ಎಂದು ತಮ್ಮ ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ.

"ಕಳೆದ ಕೆಲವು ದಿನಗಳಲ್ಲಿ ನಾವು ನಿದ್ದೆಯೇ ಮಾಡಿಲ್ಲ. ವಾರಾಂತ್ಯದ ರಜೆಗಳನ್ನೂ ರದ್ದು ಮಾಡಿಕೊಂಡಿದ್ದೇವೆ. ಮುಖ್ಯವಾಗಿ ನಮ್ಮದೇ ಹಳೇ ರೂ. 500ಗಳನ್ನು ನಾವಿನ್ನೂ ಬದಲಿಸಿಕೊಂಡಿಲ್ಲ. ಮೊದಲು ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News