×
Ad

‘ಪಾಕ್ ಉಗ್ರ ರಾಷ್ಟ್ರ’ ಘೋಷಣೆಗೆ ಟ್ರಂಪ್ ಅನುಮೋದನೆ

Update: 2016-11-17 20:47 IST

ವಾಶಿಂಗ್ಟನ್, ನ. 17: ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂಬುದಾಗಿ ಘೋಷಿಸುವ ಕಾಂಗ್ರೆಸ್‌ನ ಮಸೂದೆ ತನ್ನ ಬಳಿ ಬಂದಾಗ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದಕ್ಕೆ ಸಹಿ ಹಾಕುವರು ಎಂದು ಟ್ರಂಪ್‌ರ ಸಲಹಾ ಮಂಡಳಿಯಲ್ಲಿರುವ ಪ್ರಮುಖ ಭಾರತೀಯ ಅಮೆರಿಕನ್ ಸದಸ್ಯ ಹಾಗೂ ಗಣ್ಯ ವ್ಯಾಪಾರಿ ಶಲಭ್ ಕುಮಾರ್ ಹೇಳಿದ್ದಾರೆ.

ಇದು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಲಭಿಸುವ ದೊಡ್ಡಟ ಗೆಲುವಾಗುತ್ತದೆ ಎಂದು ಅವರು ಹೇಳಿದರು.

‘‘ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಿಸ್ಸಂಶಯವಾಗಿಯೂ ಉತ್ತಮ ಬಾಂಧವ್ಯವನ್ನು ಹೊಂದುತ್ತಾರೆ’’ ಎಂದರು.

ಟ್ರಂಪ್‌ರ ಅಧ್ಯಕ್ಷೀಯ ಅವಧಿಯಲ್ಲಿ ಭಾರತ ಮತ್ತು ಅಮೆರಿಕಗಳ ಭಾಗೀದಾರಿಕೆ ತುತ್ತ ತುದಿಯನ್ನು ತಲುಪುತ್ತದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಭಾರತದ ‘ಎಕನಾನಿಕ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಶಲಭ್ ಕುಮಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News