ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿ ಮಗುಚಿ 100 ವಲಸಿಗರು ನಾಪತ್ತೆ
Update: 2016-11-17 21:02 IST
ರೋಮ್ (ಇಟಲಿ), ನ. 17: ಲಿಬಿಯದ ಮೆಡಿಟರೇನಿಯನ್ ಸಮುದ್ರದ ಕರಾವಳಿಯಲ್ಲಿ ವಲಸಿಗರನ್ನು ಸಾಗಿಸುತ್ತಿದ್ದ ಡಿಂಗಿ ದೋಣಿಯೊಂದು ಮಗುಚಿದ ದುರಂತದಲ್ಲಿ ಸುಮಾರು 100 ಮಂದಿ ನಾಪತ್ತೆಯಾಗಿದ್ದಾರೆ ಎಂದು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಗುರುವಾರ ತಿಳಿಸಿದೆ.
ದೋಣಿಯಲ್ಲಿದ್ದ 27 ಮಂದಿಯನ್ನು ರಕ್ಷಿಸಲಾಗಿದೆ.
‘‘ಡಿಂಗಿಯಲ್ಲಿ 130 ವಲಸಿಗರು ಪ್ರಯಾಣಿಸುತ್ತಿದ್ದರು. ಅವರ ಪೈಕಿ 27 ಮಂದಿ ಬದುಕುಳಿದಿದ್ದಾರೆ. ಉಳಿದವರು ಮುಳುಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ ಈ ದುರಂತ ಅಸಹನೀಯವಾಗಿದೆ’’ ಎಂದು ಮಾನವೀಯ ನೆರವು ಸಂಘಟನೆಯು ಟ್ವೀಟ್ ಮಾಡಿದೆ.
ಮೆಡಿಟರೇನಿಯನ್ ಸಮುದ್ರದಲ್ಲಿನ ಹವಾಮಾನ ಪರಿಸ್ಥಿತಿ ಹದಗೆಡುತ್ತಿದ್ದರೂ, ಲಿಬಿಯದಿಂದ ಜನರು ನಿರಂತರವಾಗಿ ವಲಸೆ ಹೋಗುತ್ತಿದ್ದಾರೆ.
ಮೆಡಿಟರೇನಿಯನ್ ಸಮುದ್ರದಲ್ಲಿ ಶನಿವಾರದ ಬಳಿಕ 3,200ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.