ಸಿರಿಯ: ಸರಕಾರಿ ಪಡೆಗಳ ದಾಳಿಯಲ್ಲಿ 25 ನಾಗರಿಕರು ಬಲಿ
Update: 2016-11-17 21:06 IST
ಬೆರೂತ್, ನ. 17: ಸಿರಿಯದ ಅಲೆಪ್ಪೊ ನಗರದ ಪೂರ್ವದ ಜಿಲ್ಲೆಗಳ ಮೇಲೆ ಸರಕಾರಿ ಪಡೆಗಳು ಗುರುವಾರ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 25 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.
ಅಲೆಪ್ಪೊದ ಬಂಡುಕೋರ ನಿಯಂತ್ರಣದ ಪ್ರದೇಶಗಳ ಮೇಲೆ ಸಿರಿಯದ ಸೇನೆ ನಿರಂತರವಾಗಿ ಮೂರು ದಿನಗಳ ಕಾಲ ದಾಳಿ ನಡೆಸಿದೆ.
ಮಂಗಳವಾರ ಆರಂಭವಾದ ವಾಯು ದಾಳಿಯಲ್ಲಿ ಪೂರ್ವ ಅಲೆಪ್ಪೊದಲ್ಲಿ ಕನಿಷ್ಠ 65 ನಾಗರಿಕರು ಹತರಾಗಿದ್ದಾರೆ ಎಂದು ಅದು ತಿಳಿಸಿದೆ.