ತಾಪಮಾನ ವಿರುದ್ಧದ ಹೋರಾಟದಲ್ಲಿ ಭಾಗವಹಿಸಲು ಟ್ರಂಪ್‌ಗೆ ಮನವಿ
Update: 2016-11-19 21:03 IST
ಮರಾಕೇಚ್ (ಮೊರೊಕ್ಕೊ), ನ. 19: ಪ್ಯಾರಿಸ್ ಒಪ್ಪಂದದ ಬಳಿಕ ನಡೆದ ಪ್ರಥಮ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನ ಶುಕ್ರವಾರ ಮುಕ್ತಾಯಗೊಂಡಿದ್ದು, ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ಪ್ರತಿನಿಧಿಗಳು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮನವಿ ಮಾಡಿದ್ದಾರೆ. ಪೆಸಿಫಿಕ್ ದ್ವೀಪಗಳ ಮೇಲೆ ಜಾಗತಿಕ ತಾಪಮಾನದ ಪರಿಣಾಮಗಳನ್ನು ನೋಡುವಂತೆ ಅವರು ಟ್ರಂಪ್‌ರನ್ನು ಆಹ್ವಾನಿಸಿದ್ದಾರೆ.
ಕಳೆದ ವರ್ಷ ಅಂಗೀಕರಿಸಲಾದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿಯುವ ಸಾಧ್ಯತೆಯನ್ನು ಎದುರಿಸುತ್ತಿರುವ ದೇಶಗಳು, ಒಪ್ಪಂದದ ಪರವಾಗಿ ನಿಂತವು ಹಾಗೂ ಏನೇ ಆದರೂ, ಈ ಜಾಗತಿಕ ತಾಪಮಾನದ ವಿರುದ್ಧದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ತಮ್ಮ ದೃಢ ನಿರ್ಧಾರವನ್ನು ಪ್ರಕಟಿಸಿದವು.