×
Ad

ಪಾಕಿಸ್ತಾನದಲ್ಲಿ ಎಷ್ಟು ಪರಮಾಣು ಬಾಂಬ್ ಇದೆ ಗೊತ್ತೇ ?

Update: 2016-11-19 21:18 IST

ವಾಶಿಂಗ್ಟನ್, ನ. 19: ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಿಸ್ತರಿಸುತ್ತಿದೆ ಹಾಗೂ ಅದರ ಬಳಿ ಈಗ 130ರಿಂದ 140 ಪರಮಾಣು ಬಾಂಬ್‌ಗಳ ಸಂಗ್ರಹವಿದೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ ‘ಬುಲೆಟಿನ್ ಆಫ್ ಅಟೋಮಿಕ್ ಸಯಂಟಿಸ್ಟ್ಸ್’ ಹೇಳಿದೆ.


 ಅದೇ ವೇಳೆ, ಎಫ್-16 ವಿಮಾನಗಳು ಸೇರಿದಂತೆ ಕೆಲವು ಯುದ್ಧ ವಿಮಾನಗಳನ್ನು ಪರಮಾಣು ಬಾಂಬ್‌ಗಳನ್ನು ಒಯ್ಯಲು ಸಾಧ್ಯವಾಗುವ ರೀತಿಯಲ್ಲಿ ಪರಿವರ್ತನೆಗೊಳಿಸುತ್ತಿದೆ ಎಂದು ವರದಿ ತಿಳಿಸಿದೆ.


ಪಾಕಿಸ್ತಾನದ ಸೇನೆಯ ನೆಲೆಗಳು ಮತ್ತು ವಾಯು ಪಡೆ ನೆಲೆಗಳ ಅಗಾಧ ವಾಣಿಜ್ಯ ಉಪಗ್ರಹ ಚಿತ್ರಗಳ ವಿಶ್ಲೇಷಣೆಯನ್ನು ಆಧರಿಸಿ ಹ್ಯಾನ್ಸ್ ಎಂ. ಕ್ರಿಸ್ಟನ್‌ಸನ್ ಮತ್ತು ರಾಬರ್ಟ್ ಎಸ್. ನೊರಿಸ್ ಈ ವರದಿ ಬರೆದಿದ್ದಾರೆ.


ಮೊಬೈಲ್ ಉಡಾವಕಗಳು ಮತ್ತು ಭೂಗತ ಸಂಸ್ಥಾಪನೆಗಳಂತೆ ಕಂಡುಬರುವ ಚಿತ್ರಗಳು ಪರಮಾಣು ಶಸ್ತ್ರಗಳಿಗೆ ಸಂಬಂಧಿಸಿದ್ದಾಗಿರಬಹುದು ಎಂದು ವರದಿ ತಿಳಿಸಿದೆ.
ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಇನ್ನಷ್ಟು ಸಿಡಿತಲೆಗಳು ಹಾಗೂ ಒಯ್ಯುವ ವ್ಯವಸ್ಥೆಗಳನ್ನು ಸೇರಿಸುವ ಮೂಲಕ ಮತ್ತು ವಿದಳನ ಸಾಮಗ್ರಿ ಉತ್ಪಾದನೆ ಉದ್ದಿಮೆಯನ್ನು ಬೆಳೆಸುವ ಮೂಲಕ ಪರಮಾಣು ಸಾಮರ್ಥ್ಯವನ್ನು ವೃದ್ಧಿಸಲು ಪ್ರಯತ್ನಿಸುತ್ತಿದೆ ಎಂದು ‘ಪಾಕಿಸ್ತಾನ ನ್ಯೂಕ್ಲಿಯರ್ ಫೋರ್ಸಸ್, 2016’ ಎಂಬ ಹೆಸರಿನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News