×
Ad

ನಕ್ಸಲರ ನೆಲಬಾಂಬ್ ಸ್ಫೋಟಕ್ಕೆ ಸಿಆರ್‌ಪಿಎಫ್ ಜವಾನ ಬಲಿ; ಇನ್ನೊಬ್ಬನಿಗೆ ಗಾಯ

Update: 2016-11-22 23:48 IST

ರಾಯ್ಪುರ, ನ.22: ಛತ್ತೀಸ್‌ಗಡದ ಭಯೋತ್ಪಾದನಾ ಪೀಡಿತ ಸುಕ್ಮಾ ಜಿಲ್ಲೆಯ ದಟ್ಟಡವಿಯಲ್ಲಿ ನಕ್ಸಲೀಯರು ನಡೆಸಿದ ಬಾಂಬ್ ಸ್ಫೋಟದಲ್ಲಿ ಒಬ್ಬ ಸಿಆರ್‌ಪಿಎಫ್ ಸಿಬ್ಬಂದಿ ಬಲಿಯಾಗಿದ್ದು, ಇನ್ನೊಬ್ಬನಿಗೆ ಗಾಯಗಳಾಗಿವೆ.

ಸಿಆರ್‌ಪಿಎಫ್‌ನ 74ನೆ ಬೆಟಾಲಿಯನ್ ಇಂದು ನಸುಕಿನ ವೇಳೆ ಚಿಂತಲ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರದೇಶದ ಮೇಲೆ ಹಿಡಿತ ಸಾಧಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಈ ಘಟನೆ ಸಂಭವಿಸಿದೆಯೆಂದು ಸಿಆರ್‌ಪಿಎಫ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುರ್ಕಪಾಲ್ ಪೊಲೀಸ್ ಶಿಬಿರ ಹಾಗೂ ಚಿಂತಲ್ನಾರ್‌ಗಳ ನಡುವಿನ ಪ್ರದೇಶವನ್ನು ಸುತ್ತುವರಿಯುವ ವೇಳೆ ಜವಾನರು, ನೆಲದಲ್ಲಿ ಹುಗಿದಿರಿಸಲಾಗಿದ್ದ ಸುಧಾರಿತ ಸ್ಫೋಟ ಸಾಧನವೊಂದರ ಮೇಲೆ ತಿಳಿಯದೆ ಕಾಲಿಟ್ಟರು. ಆಗ ಸಂಭವಿಸಿದ ಸ್ಫೋಟದಲ್ಲಿ 74ನೆ ಬೆಟಾಲಿಯನ್‌ನ ಸಬ್‌ಇನ್‌ಸ್ಪೆಕ್ಟರ್ ಬಿ.ಎಸ್. ಬಿಸ್ತ್ ಹಾಗೂ ಹೆಡ್‌ಕಾನ್‌ಸ್ಟೇಬಲ್ ಸುಧಾಕರ್ ಎಂಬವರು ಗಾಯಗೊಂಡರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News