×
Ad

ವಿಮಾನದಲ್ಲಿ ಹಳೆ ನೋಟು ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

Update: 2016-11-22 23:51 IST

ದಿಮಾಪುರ, ನ.22: ರೂ.5.5 ಕೋಟಿ ವೌಲ್ಯದ ರದ್ದಾಗಿರುವ ನೋಟುಗಳನ್ನು ಬಾಡಿಗೆ ವಿಮಾನದಲ್ಲಿ ಕೊಂಡೊಯ್ಯುತ್ತಿದ್ದ ಆರೋಪದಲ್ಲಿ ಬಿಹಾರದ ವ್ಯಾಪಾರಿಯೊಬ್ಬನನ್ನು ನಾಗಾಲ್ಯಾಂಡ್‌ನ ದಿಮಾಪುರ ವಿಮಾನ ನಿಲ್ದಾಣದಿಂದ ಇಂದು ಬಂಧಿಸಲಾಗಿದೆ.

ವಿಮಾನವು ಇಲ್ಲಿ ಇಳಿದೊಡನೆಯೇ, ಬಿಹಾರದ ಮುಂಗೇರ್ ಜಿಲ್ಲೆಯ ಎ.ಸಿಂಗ್ ಎಂದು ಗುರುತಿಸಲಾಗಿರುವ ಆ ವ್ಯಕ್ತಿಯ ವಿಚಾರಣೆಯನ್ನು ಕೇಂದ್ರೀಯ ಭದ್ರತಾ ಸಂಸ್ಥೆಗಳು ಹಾಗೂ ಸಿಐಎಸ್‌ಎಫ್ ಅಧಿಕಾರಿಗಳು ನಡೆಸುತ್ತಿವೆ. ವಿಮಾನವು ಇಂದು ನಸುಕಿನಲ್ಲಿ ಹರ್ಯಾಣದ ಸಿರ್ಸಾದಿಂದ ಗಗನಕ್ಕೇರಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News