ಒಬಾಮ ಅಭಿಮಾನಿಯಾದ ಟ್ರಂಪ್!

Update: 2016-11-23 15:30 GMT

ವಾಶಿಂಗ್ಟನ್, ನ. 23: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಅಭಿಮಾನಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ: ಡೊನಾಲ್ಡ್ ಟ್ರಂಪ್!

ಚುನಾವಣಾ ಪ್ರಚಾರದ ಉದ್ದಕ್ಕೂ ಒಬಾಮ ವಿರುದ್ಧ ಟ್ರಂಪ್ ಕೆಂಡ ಕಾರಿದ್ದರು. ಅವರೊಬ್ಬ ಅನರ್ಹ ಅಧ್ಯಕ್ಷ ಎಂಬುದಾಗಿ ಬಣ್ಣಿಸಿದ್ದರು. ಆದರೆ, ಮಂಗಳವಾರ ಟ್ರಂಪ್ ಒಬಾಮರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.


‘‘ನಾನು ಅವರನ್ನು ಇಷ್ಟ ಪಡುತ್ತೇನೋ ಎನ್ನುವುದು ತಿಳಿದಿರಲಿಲ್ಲ. ನಾನು ಇಷ್ಟಪಡುವುದಿಲ್ಲ ಎಂಬುದಾಗಿ ನಾನು ಬಹುಷಃ ಯೋಚಿಸಿದ್ದಿರಬಹುದು. ಆದರೆ, ನಾನು ಅವರನ್ನು ಇಷ್ಟ ಪಟ್ಟಿದ್ದೇನೆ. ನಾನು ಅವರ ವಿಷಯದಲ್ಲಿ ಸಂತೋಷವಾಗಿಯೇ ಇದ್ದೇನೆ’’ ಎಂದು ‘ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News