ಭಾರತೀಯರಿಗೆ ಥಾಯ್ಲೆಂಡ್ ವೀಸಾ ಶುಲ್ಕ ಅರ್ಧದಷ್ಟು ಇಳಿಕೆ

Update: 2016-11-23 15:34 GMT

ಬ್ಯಾಂಕಾಕ್, ನ. 23: ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ, ಭಾರತ ಮತ್ತು ಇತರ 18 ದೇಶಗಳ ಪ್ರವಾಸಿಗರಿಗಾಗಿ ‘ಆಗಮಿಸಿದ ಬಳಿಕ ವೀಸಾ’ (ವೀಸಾ ಆನ್ ಅರೈವಲ್)ದ ಶುಲ್ಕವನ್ನು ಥಾಯ್ಲೆಂಡ್ ಅರ್ಧ ಭಾಗದಷ್ಟು ಕಡಿಮೆಗೊಳಿಸಿದೆ.

‘ಆಗಮಿಸಿದ ಬಳಿಕ ವೀಸಾ’ದ ಈಗಿನ ಶುಲ್ಕ 1000 ಬಹ್ತ್ (ಸುಮಾರು 2,000 ರೂಪಾಯಿ).

ಸುಮಾರು ಎರಡು ತಿಂಗಳ ಹಿಂದೆ, ಅಂದರೆ ಸೆಪ್ಟಂಬರ್ 27ರಂದು ವೀಸಾ ಶುಲ್ಕವನ್ನು 2,000 ಬಹ್ತ್‌ಗೆ ಏರಿಸಲಾಗಿತ್ತು.

ಭಾರತ, ಅಂಡೋರ, ಬಲ್ಗೇರಿಯ, ಭೂತಾನ್, ಚೀನಾ, ಸೈಪ್ರಸ್, ಇತಿಯೋಪಿಯ, ಕಝಕಿಸ್ತಾನ್, ಲಾತ್ವಿಯ, ಲಿತುವೇನಿಯ, ಮಾಲ್ದೀವ್ಸ್, ಮಾಲ್ಟ, ಮಾರಿಶಸ್, ರೊಮೇನಿಯ, ಸ್ಯಾನ್ ಮರಿನೊ, ಸೌದಿ ಅರೇಬಿಯ, ತೈವಾನ್, ಯುಕ್ರೇನ್ ಮತ್ತು ಉಝ್ಬೆಕಿಸ್ತಾನಗಳ ಪ್ರಜೆಗಳಿಗೆ ಥಾಯ್ಲೆಂಡ್ ಪ್ರಸಕ್ತ ‘ಆಗಮಿಸಿದ ಬಳಿಕ ವೀಸಾ’ ಸೌಲಭ್ಯವನ್ನು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News