×
Ad

ಕಾಶ್ಮೀರ: ಜನಜೀವನ ಸಹಜ ಸ್ಥಿತಿಯತ್ತ

Update: 2016-11-24 22:32 IST

 ಶ್ರೀನಗರ, ನ.24: ನೂರಕ್ಕೂ ಹೆಚ್ಚು ದಿನ ಪ್ರತಿಭಟನೆ, ಕಲ್ಲು ತೂರಾಟ, ಕರ್ಪ್ಯೂ ಇತ್ಯಾದಿಗಳಿಂದ ತೊಂದರೆಗೊಳಗಾಗಿದ್ದ ಜಮ್ಮು ಕಾಶ್ಮೀರದ ಜನಜೀವನ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ.

ನಗರದ ಪ್ರಮುಖ ಮಾರುಕಟ್ಟೆಗಳಾದ ಟಿಆರ್‌ಸಿ ಚೌಕ, ಲಾಲ್ ಚೌಕ ಮುಂತಾದೆಡೆ ಅಂಗಡಿ ಮುಂಗಟ್ಟುಗಳು ತೆರೆದಿವೆ. ಜನರು ಅಗತ್ಯ ಸಾಮಾನುಗಳನ್ನು ಖರೀದಿಸುವಲ್ಲಿ ನಿರತರಾಗಿರುವ ದೃಶ್ಯ ಕಂಡು ಬಂದಿದೆ. ಅಲ್ಲದೆ ಸಾರಿಗೆ ವ್ಯವಸ್ಥೆಯೂ ಆರಂಭವಾಗಿದ್ದು, ಮಿನಿ ಬಸ್, ಆಟೋ ರಿಕ್ಷಾ ಮತ್ತು ಕ್ಯಾಬ್‌ಗಳಲ್ಲಿ ಜನಸಂಚಾರ ಸಾಕಷ್ಟಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News