ಪಾಕ್ ವಿರುದ್ಧ ದ್ವಿತೀಯ ಟೆಸ್ಟ್: ಬೌಲ್ಟ್ ಅಲಭ್ಯ

Update: 2016-11-24 18:24 GMT

ವೆಲ್ಲಿಂಗ್ಟನ್, ನ.24: ಅಭ್ಯಾಸದ ವೇಳೆ ಬಲ ಭಾಗದಲ್ಲಿ ಮಂಡಿ ನೋವು ಉಲ್ಬಣಿಸಿದ ಕಾರಣ ನ್ಯೂಝಿಲೆಂಡ್‌ನ ಪ್ರಮುಖ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಪಾಕಿಸ್ತಾನ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

 ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಫೀಲ್ಡಿಂಗ್‌ನ ವೇಳೆ ಎಡಗೈ ವೇಗದ ಬೌಲರ್ ಬೌಲ್ಟ್‌ಗೆ ಮಂಡಿನೋವು ಕಾಣಿಸಿಕೊಂಡಿತ್ತು. ಮೊದಲ ಟೆಸ್ಟ್ ಪಂದ್ಯವನ್ನು ಕಿವೀಸ್ 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಟ್ರೆಂಟ್‌ಗೆ ಭಾರತ ಪ್ರವಾಸದಿಂದ ಮರಳಿದ ಬಳಿಕ ಮಂಡಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಅದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಅವರು ಆಸ್ಟ್ರೇಲಿಯ ವಿರುದ್ಧ ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಲಭ್ಯವಿರುವ ವಿಶ್ವಾಸದಲ್ಲಿದ್ದೇನೆ ಎಂದು ಕಿವೀಸ್ ಕೋಚ್ ಮೈಕ್ ಹೆಸ್ಸನ್ ತಿಳಿಸಿದ್ದಾರೆ.

ಆಲ್‌ರೌಂಡರ್ ಡೌಗ್ ಬ್ರಾಸ್‌ವೆಲ್ ಶುಕ್ರವಾರದಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡದಲ್ಲಿ ಆಡಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News