ಇರಾನ್‌ನಲ್ಲಿ ರೈಲು ದುರಂತ ; 36 ಸಾವು
Update: 2016-11-25 21:26 IST
ಅನ್ಕಾರ, ನ.25: ಇರಾನ್‌ನಲ್ಲಿ ಎರಡು ಪ್ರಯಾಣಿಕ ರೈಲುಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ 36ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟು , 95 ಮಂದಿ ಗಾಯಗೊಂಡ ಘಟನೆ ಇಂದು ನಡೆದಿದೆ.
ಟೆಹ್ರಾನ್‌ನಿಂದ 400 ಕಿ.ಮೀ ದೂರದಲ್ಲಿರುವ ಶಾಹ್ರೋಡ್ ಎಂಬಲ್ಲಿ ರೈಲುಗಳೆರಡು ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು ಎಂದು ಟಿವಿ ಚಾನಲ್‌ಗಳು ವರದಿ ಮಾಡಿದೆ. ಡಿಕ್ಕಿ ಸಂಭವಿಸಿದ ಬೆನ್ನೆಲ್ಲೆ ಎರಡು ರೈಲುಗಳಿಗೂ ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ. ಅಪಘಾತದಿಂದಾಗಿ ಹಳಿ ತಪ್ಪಿ ಮಗುಚಿ ಬಿದ್ದ ರೈಲು ಬೋಗಿಯೊಳಗೆ ಸಿಲುಕಿಕೊಂಡಿದ್ದ ನೂರಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.