ಆರ್‌ಬಿಐ ಕೌಂಟರ್‌ಗಳಲ್ಲಿ ಮಾತ್ರ ಹಳೆಯ ನೋಟುಗಳ ವಿನಿಮಯ
Update: 2016-11-25 23:26 IST
ಹೊಸದಿಲ್ಲಿ,ನ.25: ಹೊಸ ನೋಟುಗಳಿಗೆ ಹಳೆಯ 500 ಮತ್ತು 1,000 ರೂ.ನೋಟುಗಳ ವಿನಿಮಯ ಸೌಲಭ್ಯವನ್ನು ಬ್ಯಾಂಕುಗಳಲ್ಲಿ ನಿಲ್ಲಿಸಲಾಗಿದ್ದರೂ ಆರ್‌ಬಿಐ ಕೌಂಟರ್‌ಗಳಲ್ಲಿ ಮುಂದುವರಿದಿದೆ. ಗ್ರಾಹಕರು ತಮ್ಮ ಬಳಿಯ ಹಳೆಯ ನೋಟುಗಳನ್ನು 2,000 ರೂ.ಮಿತಿಗೊಳಪಟ್ಟು ಆರ್‌ಬಿಐನಲ್ಲಿ ವಿನಿಮಯಿಸಿಕೊಳ್ಳಬಹುದು.
ಇಂದಿನಿಂದ ಬ್ಯಾಂಕುಗಳಲ್ಲಿ ಹಳೆಯ ನೋಟುಗಳ ವಿನಿಮಯಕ್ಕೆ ಅವಕಾಶವಿಲ್ಲ ಎಂದು ಗುರುವಾರ ಪ್ರಕಟಿಸಿದ್ದ ಕೇಂದ್ರವು,ಅವುಗಳನ್ನು ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಜಮಾ ಮಾಡಬಹುದು ತಿಳಿಸಿತ್ತು.