ವೈರಲ್ ವೀಡಿಯೊ: ಚಪ್ಪಲಿ ಹೊಲಿಯುವವನಿಗೆ ಅಚ್ಛೇ ದಿನ್ ತಂದ ಸ್ಮೃತಿ ಇರಾನಿ !

Update: 2016-11-28 12:16 GMT

ಕೊಯಂಬತ್ತೂರು, ನ. 26 : ಕೇಂದ್ರ ಸಚಿವರೊಬ್ಬರು ತನ್ನ ಗೂಡಂಗಡಿಗೆ ಖುದ್ದು ಬರುವುದೇ ಬಡ ಚಪ್ಪಲಿ ಹೊಲಿಯುವವನ ಪಾಲಿಗೆ ಕನಸು ಕಂಡಂತೆ. ಆದರೆ ಕೇಂದ್ರ ಸಚಿವರು ಬಂದು ಕೇಳಿದ ಹತ್ತು ಪಟ್ಟು ಹೆಚ್ಚು ಹಣ ಕೊಟ್ಟರೆ ?

ಇಲ್ಲಿನ ಇಶಾ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿಳಿದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯ ಚಪ್ಪಲಿಯ  ಪಟ್ಟಿ ತುಂಡಾಗಿತ್ತು. ಕಾರ್ಯಕ್ರಮಕ್ಕೆ ಹೋಗುವ ದಾರಿಯಲ್ಲಿ ಎಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ಹುಡುಕುತ್ತಿದ್ದ ಸ್ಮೃತಿ ಇರಾನಿಗೆ ಅವರ ಜೊತೆ ಇದ್ದ ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ವನತಿ ಶ್ರೀನಿವಾಸನ್  ಅವರು ಪೇರೂರ್ ನಲ್ಲಿ ಒಬ್ಬ ಚಪ್ಪಲಿ ಹೊಲಿಯುವವನನ್ನು ಕಂಡು ಹುಡುಕಿದರು. ಕಾರಿನಿಂದ ಇಳಿದ ಸ್ಮೃತಿ ತಮ್ಮ ಚಪ್ಪಲಿಯನ್ನು ಅಂಗಡಿಯವನ ಕೈಗಿಟ್ಟರು. ಸಚಿವರನ್ನು ನೋಡಿ ಗೊಂದಲಗೊಂಡ ಅಂಗಡಿಯವನನ್ನು ಶ್ರೀನಿವಾಸನ್ ಅವರು ಸಮಾಧಾನಿಸಿ, ಬೇಗ  ಮಾಡಿಕೊಡುವಂತೆ ಹೇಳಿದರು. ಸಾವರಿಸಿಕೊಂಡ ಅಂಗಡಿಯಾತ ತಕ್ಷಣ ಕೆಲಸ ಮುಗಿಸಿಕೊಟ್ಟ. 

ಹೊಲಿಗೆಯ ವೆಚ್ಚ ಹತ್ತು ರೂಪಾಯಿ ಆಗಿತ್ತು. ಆದರೆ ನೂರು ರೂಪಾಯಿಯನ್ನು ಕೊಟ್ಟು ಇರಾನಿ ' ಚೇಂಜ್ ವೆಂಡ (ಚೇಂಜ್ ಬೇಡ )' ಎಂದು ಹೇಳಿದರು. ಖುಷಿಯಾದ ಆತ ಸಚಿವೆಯ ಚಪ್ಪಲಿಗೆ ಒಂದೆರಡು ಹೊಲಿಗೆ ಹೆಚ್ಚು ಹಾಕಿ ನಗುಮುಖದಿಂದ ಬೀಳ್ಕೊಟ್ಟ.  ಈಗ ಸ್ಮೃತಿಯ ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News