ಮೊಬೈಲ್ ಕರೆನ್ಸಿ ರೀಚಾರ್ಜ್ ಮೇಲೆ ಸರಕಾರದ ಕಣ್ಣು
Update: 2016-11-26 23:58 IST
ಹೊಸದಿಲ್ಲಿ,ನ.26: ಪ್ರಿಪೇಯಿಡ್ ಮೊಬೈಲ್ ವೋಚರ್‌ಗಳನ್ನು ಮಾರುವ ಮೊಬೈಲ್ ರೀಚಾರ್ಜ್ ಅಂಗಡಿಗಳು ಹಳೆಯ ನೋಟುಗಳನ್ನು ನೀಡಿ ತಮ್ಮ ಮೊಬೈಲ್ ಫೋನ್‌ಗಳಿಗೆ ಕರೆನ್ಸಿ ಹಾಕಿಸಿಕೊಳ್ಳುವವರ ಮೊಬೈಲ್ ನಂಬರ್‌ಗಳ ವಿವರಗಳನ್ನು ತಮ್ಮ ಸೇವಾ ಪೂರೈಕೆ ಕಂಪೆನಿಗಳಿಗೆ ಸಲ್ಲಿಸಬೇಕಾಗಿದೆ ಎಂದು ದೂರಸಂಪರ್ಕ ಕಾರ್ಯದರ್ಶಿ ಜೆ.ಎಸ್.ದೀಪಕ್ ತಿಳಿಸಿದ್ದಾರೆ.
ಪ್ರಿಪೇಯಿಡ್ ಸಂಪರ್ಕಗಳನ್ನು ಹೊಂದಿರುವ ಮೊಬೈಲ್ ಫೋನ್ ಬಳಕೆದಾರರು ನ.24ರ ಮಧ್ಯರಾತ್ರಿಯಿಂದ ಡಿ.15ರವರೆಗೆ ಹಳೆಯ ನೋಟುಗಳನ್ನು ನೀಡಿ ಗರಿಷ್ಠ ತಲಾ 500 ರೂ. ರೀಚಾರ್ಜ್ ಮಾಡಿಸಿಕೊಳ್ಳಲು ವಿತ್ತ ಸಚಿವಾಲಯವು ಅವಕಾಶ ಕಲ್ಪಿಸಿದೆ.
ಮೊಬೈಲ್ ಕರೆನ್ಸಿಯನ್ನು ರೀಚಾರ್ಜ್ ಮಾಡುವ ಅಂಗಡಿಗಳು ಹಳೆಯ ನೋಟುಗಳನ್ನು ಗ್ರಾಹಕರ ಮೊಬೈಲ್ ಸಂಖ್ಯೆಗಳ ಜೊತೆಗೆ ಸೇವಾ ಪೂರೈಕೆ ಸಂಸ್ಥೆಗಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ದೀಪಕ್ ಸುದ್ದಿಸಂಸ್ಥೆಗೆ ತಿಳಿಸಿದರು.