×
Ad

ಟೈಮ್ಸ್ ಡಿಬೇಟ್ ನಲ್ಲಿ ಸ್ವಾಮಿ ವಿರುದ್ಧ ಮೇಲುಗೈ ಸಾಧಿಸಿದ ಉವೈಸಿ

Update: 2016-11-27 10:03 IST

ನವದೆಹಲಿ: ಕಟ್ಟಾ ಶತ್ರುಗಳಾದ ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿ ಸುಪ್ರೀಂಕೋರ್ಟ್ ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿಯ ಬಗ್ಗೆ ತೆಗೆದುಕೊಳ್ಳುವ ನಿರ್ಧಾರವನ್ನು ಅಂಗೀಕರಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಹಣಕಾಸು ಸಚಿವ ಅರುಣ್ ಜೇಟ್ಲಿ ಮೇಲೆ ವಿಶ್ವಾಸವಿಲ್ಲ ಎಂದು ಇಬ್ಬರೂ   ಒಪ್ಪಿಕೊಂಡಿದ್ದಾರೆ.ಉವೈಸಿ ಈ ಬಗ್ಗೆ ನೇರವಾಗಿ ಹೇಳಿದರೆ, ಸ್ವಾಮಿ ಆ ಬಗ್ಗೆ ಹೆಚ್ಚು ಮಾತನಾಡುವುದರಿಂದ ತಪ್ಪಿಸಿಕೊಂಡರು. ಇಬ್ಬರೂ ಟೈಮ್ಸ್ ಲಿಟ್‌ಫೆಸ್ಟ್‌ನಲ್ಲಿ ದೆಹಲಿಯಲ್ಲಿ ಮಾತನಾಡುತ್ತಿದ್ದರು. ಟಿವಿ ಪತ್ರಕರ್ತ ರಜ್‌ದೀಪ್ ಸರ್‌ದೇಸಾಯಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. “ನ್ಯಾಯಾಲಯದ ನಿರ್ಧಾರವನ್ನು ನಾನು ಅಂಗೀಕರಿಸುವೆ. ನಾನು ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ. ನಾನು ಕಾನೂನಿನ ನಿರ್ಧಾರವನ್ನು ಪಾಲಿಸುತ್ತೇನೆ” ಎಂದಿದ್ದಾರೆ. ಉವೈಸಿ ಕೂಡ ಇದೇ ಮಾತನ್ನು ಹೇಳಿದ್ದಾರೆ. “ಸ್ಥಳದಲ್ಲಿ ರಾಮ ಮಂದಿರ ಕಟ್ಟಬೇಕು ಎನ್ನುವ ನಿರ್ಧಾರವನ್ನು ಸುಪ್ರೀಂಕೋರ್ಟ್ ಕೈಗೊಂಡರೆ ಅದನ್ನು ಒಪ್ಪಿಕೊಳ್ಳುವೆ” ಎಂದು ಉವೈಸಿ ಹೇಳಿದ್ದಾರೆ.

ಚರ್ಚೆಯಲ್ಲಿ ಗೆದ್ದವರು ಯಾರೆಂದು ನೋಡಿದರೆ ಉವೈಸಿಗೆ ಹೆಚ್ಚು ಅಂಕಗಳು ಸಿಗಬೇಕು. ಅವರು ಹೆಚ್ಚು ಸಕಾರಣವಾಗಿದ್ದು, ಸ್ವಾಮಿಗಿಂತ ಚೆನ್ನಾಗಿ ತಮ್ಮ ಚರ್ಚೆಗಳಿಗೆ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಗೋಹತ್ಯೆ ನಿಷೇಧ ಮತ್ತು ಏಕರೂಪದ ನಾಗರಿಕ ಸಂಹಿತೆಯನ್ನು ಸಮರ್ಥಿಸಿಕೊಳ್ಳಲು ಸ್ವಾಮಿ ಸಂವಿಧಾನದ ನಿಯಮಗಳ (ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಅಥವಾ ಡಿಪಿ) ನೆರವು ಪಡೆದುಕೊಂಡರು. ಆದರೆ ಡಿಪಿಗಳು ಕೇವಲ ನಿರ್ದೇಶನಗಳು ಮಾತ್ರವೇ ಆಗಿವೆ ಎಂದು ಉವೈಸಿ ನೆನಪಿಸಿದರು. ಮೂಲಭೂತ ಹಕ್ಕುಗಳು ಹಿರಿತನದಲ್ಲಿ ಡಿಪಿಗಿಂತ ಹೆಚ್ಚಿನದು. ಧರ್ಮದ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ಉವೈಸಿ ನೆನಪಿಸಿದರು. ಇದಕ್ಕೆ ಉತ್ತರವಾಗಿ ಸ್ವಾಮಿ ಹಿಂದೂ ನಾಗರಿಕತೆ ಇತರ ಧರ್ಮಗಳನ್ನು ಯಾವಾಗಲೂ ಸ್ವೀಕರಿಸಿದೆ ಎಂದರು. ಭಾರತ ಹೇಗೆ ಯಹೂದಿಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಒಪ್ಪಿಕೊಂಡಿದೆ ಎಂದು ವಿವರಿಸಿದರು. “ಯಹೂದಿಗಳಿಗೆ ಇಲ್ಲಿ ತಮ್ಮ ಸಭಾಮಂದಿರಗಳನ್ನು ಕಟ್ಟಲು ಅವಕಾಶ ನೀಡಲಾಗಿದೆ. ಯಹೂದಿಗಳನ್ನು ಶಿಕ್ಷಿಸದೆ ಇರುವ ದೇಶ ನಮ್ಮದು. ಹಿಂಸಾತ್ಮಕ ಇಸ್ಲಾಂ ಸಮಾಜವನ್ನು ನಾಶ ಮಾಡಿದೆ” ಎಂದು ಸ್ವಾಮಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರಜದೀಪ್ ದೇಸಾಯಿ, ನಾಲ್ಕೈದು ಶತಮಾನಗಳ ಹಿಂದೆ ನಡೆದ ಹಿಂಸೆಗೆ 2016ರಲ್ಲಿ ಸೇಡು ತೀರಿಸಿಕೊಳ್ಳುವುದು ಸರಿಯೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಸ್ವಾಮಿ ಕೋಮುವಾದಿ ಎಂದರು. ಆದರೆ ತಾವು ಕೋಮುವಾದಿ ಎಂದು ಸ್ವಾಮಿ ಒಪ್ಪಿಕೊಳ್ಳದೆ ತಮ್ಮ ಜಾತ್ಯತೀತ ಕುಟುಂಬವನ್ನು ಉದಾಹರಿಸಿದರು. “ನನ್ನ ಪತ್ನಿ ಪಾರ್ಸಿ. ಅಳಿಯ ಮುಸ್ಲಿಂ. ನನಗೆ ಯಹೂದಿ ಭಾವ ಮತ್ತು ಕ್ರಿಶ್ಚಿಯನ್ ನಾದಿನಿ ಇದ್ದಾರೆ. ಅವರು ಯಾರೂ ನನ್ನನ್ನು ಕೋಮವಾದಿ ಎಂದಿಲ್ಲ” ಎಂದು ಸ್ವಾಮಿ ಹೇಳಿದರು. ಇದರ ಜೊತೆಗೆ ಅವರು, ಭಾರತ ಹಿಂದೂ ಬಹುಸಂಖ್ಯಾತರ ದೇಶ ಮತ್ತು ಅದೇ ನಂಬಿಕೆ ಕಾನೂನಿಗೆ ನೆರವಾಗುತ್ತದೆ. ಹೀಗಾಗಿ ಜನರಿಗೆ ರಾಮ ಇಲ್ಲಿ ಹುಟ್ಟಿದ್ದಾನೆ ಎನ್ನುವ ನಂಬಿಕೆ ಇದ್ದರೆ ಅದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂದರು. ಈ ಬಹುತ್ವವಾದದ ಮೇಲೆಯೇ ತಮಗೆ ಸಮಸ್ಯೆ ಇದೆ ಎಂದು ಉವೈಸಿ ಮಾರುತ್ತರ ನೀಡಿದರು. “ನೆಹರೂ ಕೂಡ ದೊಡ್ಡ ಆತಂಕವೆಂದರೆ ಬಹುತ್ವವಾದ ಎಂದು ಹೇಳಿದ್ದಾರೆ. ನೀವು ಜಾತ್ಯತೀತತೆ ಮತ್ತು ವೈವಿಧ್ಯತೆಯಲ್ಲಿ ನಂಬಿಕೆ ಹೊಂದಿದ್ದಲ್ಲಿ ನಾವು ಆ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿಯೇ ಗೋ ಹತ್ಯೆ ಮತ್ತು ಸಮಾನ ನಾಗರಿಕ ಸಂಹಿತೆಯಂಥ ವಿಷಯಗಳು ಮುನ್ನೆಲೆಗೆ ಬರುತ್ತಿವೆ” ಎಂದು ಉವೈಸಿ ಹೇಳಿದರು. ವೈಕಿಲೀಕ್ಸ್ ದಾಖಲೆಗಳನ್ನು ನಂಬುವುದಾದರೆ “ಹಿಂದುತ್ವ ಕೇವಲ ಮತ ಬ್ಯಾಂಕಿಗಾಗಿ” ಎಂದು ಅರುಣ್ ಜೇಟ್ಲಿ ಅವರೇ ಹೇಳಿದ್ದಾರೆ ಎಂದೂ ಉವೈಸಿ ನೆನಪಿಸಿದರು. ಇದಕ್ಕೆ ಉತ್ತರವಾಗಿ ಸ್ವಾಮಿ ತಮ್ಮ ಪಕ್ಷದ ಸಹೋದ್ಯೋಗಿಯನ್ನು ವಿರೋಧಿಸಿದರು. “ಹೌದು, ವೈಕಿಲೀಕ್ಸ್ ಅದನ್ನು ತೋರಿಸಿದೆ” ಎಂದರು.

ಕೃಪೆ: http://timesofindia.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News