ಪೂರ್ವ ಅಲೆಪ್ಪೊದ ಉತ್ತರದ ಭಾಗಗಳನ್ನು ಕಳೆದುಕೊಂಡ ಬಂಡುಕೋರರು

Update: 2016-11-28 16:00 GMT

ಬೆರೂತ್ (ಲೆಬನಾನ್), ನ. 28: ಸಿರಿಯದ ಪೂರ್ವ ಅಲೆಪ್ಪೊದ ಉತ್ತರ ಭಾಗದಲ್ಲಿ ತಾವು ಹೊಂದಿದ್ದ ಎಲ್ಲ ಭದ್ರ ನೆಲೆಗಳನ್ನು ಬಂಡುಕೋರರು ಕಳೆದುಕೊಂಡಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಸೋಮವಾರ ಹೇಳಿದೆ.

ಸೇನೆಯು ನಗರದ ಸಖುರ್, ಹೇಡರಿಯ ಮತ್ತು ಶೇಖ್ ಖೋಡರ್ ಉಪನಗರಗಳಣ್ನು ಸೋಮವಾರ ತನ್ನ ವಶಕ್ಕೆ ಪಡೆದುಕೊಂಡಿದೆ ಹಾಗೂ ಕುರ್ದಿಶ್ ಪಡೆಗಳು ಶೇಖ್ ಫರೇಸ್ ಜಿಲ್ಲೆಯನ್ನು ಬಂಡುಕೋರರಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅದು ತಿಳಿಸಿದೆ.

ಅಲೆಪ್ಪೊದಲ್ಲಿರುವ ಕುರ್ದಿಶ್ ಪಡೆಗಳು ಅಧಿಕೃತವಾಗಿ ಸರಕಾರಿ ಸೇನೆಯೊಂದಿಗೆ ಮೈತ್ರಿ ಹೊಂದಿಲ್ಲ, ಆದರೆ, ಅವುಗಳು ನಗರವನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸರಕಾರಕ್ಕೆ ಸಹಕಾರ ನೀಡುತ್ತಿವೆ ಎಂಬುದಾಗಿ ಪ್ರತಿಪಕ್ಷಗಳು ಪರಿಗಣಿಸಿವೆ.

‘‘ಪೂರ್ವ ಅಲೆಪ್ಪೊದ ಉತ್ತರದಲ್ಲಿರುವ ಎಲ್ಲ ಉಪನಗರಗಳ ಮೇಲಿನ ನಿಯಂತ್ರಣವನ್ನು ಬಂಡುಕೋರರು ಕಳೆದುಕೊಂಡಿದ್ದಾರೆ. 2012ರಲ್ಲಿ ನಗರದ ಅರ್ಧ ಭಾಗವನ್ನು ವಶಪಡಿಸಿಕೊಂಡ ಬಳಿಕ ಬಂಡುಕೋರರು ಅನುಭವಿಸಿದ ಅತ್ಯಂತ ಆಘಾತಕಾರಿ ಸೋಲು ಇದಾಗಿದೆ’’ ಎಂದು ವೀಕ್ಷಣಾಲಯದ ನಿರ್ದೇಶಕ ರಮಿ ಅಬ್ದುಲ್ ರಹಮಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News