ಮೂರನೆ ಟೆಸ್ಟ್: ಭಾರತದ ಗೆಲುವಿಗೆ 103 ರನ್‌ಗಳ ಸವಾಲು
Update: 2016-11-29 13:57 IST
ಮೊಹಾಲಿ, ನ.29: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಗೆಲುವಿಗೆ 103 ರನ್ ಗಳಿಸಬೇಕಾಗಿದೆ.
ಇಂಗ್ಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ 90.3 ಓವರ‍್ ಗಳಲ್ಲಿ 236 ರನ್‌ಗಳಿಗೆ ಅಲೌಟಾಗಿದೆ.ಜೋ ರೂಟ್ 78 ರನ್, ಹಸೀಬ್ ಹಮೀದ್ ಔಟಾಗದೆ 59 ರನ್ ಮತ್ತು ಕ್ರಿಸ್ ವೋಕ್ಸ್ 30 ರನ್ ಗಳಿಸಿದರು.
ಭಾರತದ ಪರ ಆರ್.ಅಶ್ವಿನ್ 81ಕ್ಕೆ 3, ಮುಹಮ್ಮದ್ ಶಮಿ, ಜಯಂತ್, ಜಡೇಜ ತಲಾ2ವಿಕೆಟ್ ಪಡೆದರು.